Friday, July 24, 2026
spot_imgspot_img
spot_imgspot_img

ಬೆಂಗಳೂರು: ನಾಲ್ಕು ವರ್ಷದ ಮಗಳನ್ನು ಬೆಂಕಿ ಹಚ್ಚಿ ಕೊಂದ ತಾಯಿ!

- Advertisement -
- Advertisement -

ಬೆಂಗಳೂರು : ನಾಲ್ಕು ವರ್ಷದ ಮಗಳನ್ನು ಬೆಂಕಿ ಹಚ್ಚಿ ಕೊಂದು ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಜಯನಗರ ಕೃಷ್ಣಪ್ಪ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಪತಿ – ಪತ್ನಿ ನಡುವೆ ನಡೆದ ಜಗಳ ಈ ಘಟನೆಗೆ ಕಾರಣ ಎನ್ನಲಾಗಿದೆ. 29 ವರ್ಷದ ಸೀತಾ, 4 ವರ್ಷದ ಸೃಷ್ಟಿ ಮೃತ ತಾಯಿ ಮಗಳು.

ಸೀತಾ ಮತ್ತು ಆಕೆಯ ಪತಿ ಗೋವಿಂದ್ ಬಹದ್ದೂರ್ ನೇಪಾಳ ಮೂಲದವರು. ಬೆಂಗಳೂರಿನಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕೆಲಸ ಮಾಡುತ್ತಿದ್ದ ಮನೆಯ ಪಕ್ಕದಲ್ಲೇ ಸಣ್ಣ ಮನೆಯೊಂದನ್ನು ಅವರಿಗೆ ನೀಡಲಾಗಿತ್ತು. ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪತಿ ಗೋವಿಂದ್ ಬಹದ್ದೂ‌ರ್ ಪತ್ನಿ ಮತ್ತು ಮಗಳನ್ನು ಬಿಟ್ಟು ನೇಪಾಳಕ್ಕೆ ಹೋದರೆ ಐದಾರು ತಿಂಗಳುಗಳ ಕಾಲ ಮರಳಿ ಬರುತ್ತಿರಲಿಲ್ಲ ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನವೂ ಪತಿ-ಪತ್ನಿ ಫೋನ್ ನಲ್ಲಿ ಜಗಳವಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!