- Advertisement -
- Advertisement -



ಬಂಟ್ವಾಳ: ಮಹಾತೋಭಾರ ಚಿಂತಾಮಣಿ ಶ್ರೀ ಲಕ್ಷೀ ನರಸಿಂಹ ಸ್ವಾಮಿ ದೇವಸ್ಥಾನ ಕಡೇಶಿವಾಲಯ ಇಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದತೆ ಫೆ. 15 ಆದಿತ್ಯವಾರದಂದು ಚಿಂತಾಮಣಿ ಶ್ರೀ ಲಕ್ಷೀ ನರಸಿಂಹ ದೇವರ ಹಾಗೂ ಕ್ಷೇತ್ರದಲ್ಲಿ ಸೂಕ್ಷ ರೂಪದಲ್ಲಿರುವ ಶಿವ ದೇವರ ಪ್ರೀತ್ಯರ್ಥವಾಗಿ ಬ್ರಹ್ಮಶ್ರೀ ಉಚ್ಚಿಂತಾಲಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಶತರುದ್ರಾಭಿಷೇಕ ಹಾಗೂ ರುದ್ರ ಹೋಮ ಮತ್ತು ಸಾರ್ವಜನಿಕ ರಂಗಪೂಜೆ ನಡೆಯಲಿದೆ.
ಬೆಳಿಗ್ಗೆ 8ಗಂಟೆ ಗಣಪತಿಹೋಮ, 8.30ರಿಂದ ಶತರುದ್ರಾಭಿಷೇಕ , 9 ರಿಂದ ರುದ್ರಹೋಮ, 7.30ಕ್ಕೆ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ನಾರಳ್ತಾಯ ದೈವ ಮತ್ತು ಪರಿವಾರ ದೈವಗಳಿಗೆ ಪರ್ವ, ರಾತ್ರಿ 7.30ಕ್ಕೆ ಶ್ರೀ ದೇವರಿಗೆ ರಂಗಪೂಜೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
- Advertisement -








