- Advertisement -
- Advertisement -



ಚೆನ್ನೈ : ಖ್ಯಾತ ಸಂಗೀತ ನಿರ್ದೇಶಕ ಎಸ್.ಪಿ. ವೆಂಕಟೇಶ್ (70 ) ನಿಧನರಾಗಿದ್ದಾರೆ. ಹೃದಯಾಘಾತದಿಂದ ಚೆನ್ನೈನಲ್ಲಿರುವ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆಂದು ತಿಳಿದು ಬಂದಿದೆ.
ಅವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಬಂಗಾಳಿ ಚಲನಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಒಟ್ಟು 500 ಕ್ಕೂ ಹೆಚ್ಚಿನ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.
ಮಲಯಾಳಂ ಚಿತ್ರರಂಗಕ್ಕೆ ಎವರ್ ಗ್ರೀನ್ ಹಾಡುಗಳನ್ನು ನೀಡಿದ ಕೀರ್ತಿ ವೆಂಕಟೇಶ್ ಅವರಿಗಿದೆ, ರಾಜಾವಿಂಟೆ ಮಕನ್, ಕಿಲುಕ್ಕಂ, ಸ್ಪಟಿಕಂ, ಇತ್ಯಾದಿ ಮಲಯಾಳಂ ಸಿನಿಮಾಗಳ ಮೂಲಕ ಹಿಟ್ ಹಾಡುಗಳನ್ನು ನೀಡಿದ್ದಾರೆ.
- Advertisement -








