


ಕೋಲಾರ: ಜಿಲ್ಲೆಯ ಮುಳಬಾಗಿಲಿನಲ್ಲಿ ಫ್ರೀ ಹೆಲ್ಮೆಟ್‌ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ಸವಾರರು ಮುಗಿಬಿದ್ದ ಘಟನೆ ನಡೆಯಿತು. ಸುಮಾರು 20 ಸಾವಿರ ಹೆಲ್ಮೆಟ್ ಉಚಿತವಾಗಿ ವಿತರಿಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.
ಬೃಹತ್ ಮಟ್ಟದ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹೆಲ್ಮೆಟ್ ಪಡೆಯಲು ನೂಕು ನುಗ್ಗಲು ಅನುಭವಿಸಿದ ಘಟನೆ ಸಹ ನಡೆಯಿತಾದ್ರು ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಬಾಲಾಜಿ ಭವನದ ಬಳಿ ಕಾಂಗ್ರೆಸ್ ಪಕ್ಷ ಮತ್ತು ಅದಿನಾರಾಯಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಯಿತು. ಸುಮಾರು 20 ಸಾವಿರ ಹೆಲ್ಮೆಟ್‌ಗಳನ್ನ ಬೈಕ್ ಸವಾರರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.
ಕೋಲಾರ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಆದಿ ನಾರಾಯಣ ಅವರು ಬೃಹತ್ ಹೆಲ್ಮೆಟ್ ವಿತರಣೆ ಮಾಡಿದ್ರು. ಸುಮಾರು 20 ಸಾವಿರ ಹೆಲ್ಮೆಟ್ ಉಚಿತವಾಗಿ ವಿತರಣೆಗೆ ಬೈಕ್ ಸವಾರರು ಸರದಿ ಸಾಲಿನಲ್ಲಿ ಬಂದು ಬೈಕ್ ತಂದವರಿಗೆ ಮಾತ್ರ ಹೆಲ್ಮೆಟ್ ವಿತರಣೆ ಮಾಡಲಾಯಿತು. 14 ಕೌಂಟರ್‌ಗಳನ್ನು ಮಾಡಿ ಹೆಲ್ಮೆಟ್ ವಿತರಣೆ ಮಾಡಿದ ಕಾರ್ಯಕ್ರಮವನ್ನ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟನೆ ಮಾಡಿದ್ರು. ಕೊನೆಯಲ್ಲಿ ಹೆಲ್ಮೆಟ್ ಕಡಿಮೆ ಇರುವುದನ್ನು ಅರಿತ ಜನರು ಕ್ಯಾಂಟರ್ ಹತ್ತಿ ಹೆಲ್ಮೆಟ್ ಪಡೆದುಕೊಂಡರು. ಈ ವೇಳೆ ಕೆಲವೇ ನಿಮಿಷಗಳಲ್ಲಿ ಹೆಲ್ಮೆಟ್‌ಗಳು ಖಾಲಿಯಾಯ್ತು. ಕ್ಯಾಂಟರ್ ಮೇಲೆ ಹತ್ತಿ ಹೆಲ್ಮೆಟ್ ಹೊತ್ತೊಯ್ದ ಜನರನ್ನ ನಿಯಂತ್ರಿಸಲು ಹಾಗೂ ಕಾರ್ಯಕ್ರಮದಲ್ಲಿ ಗೊಂದಲ ನಿವಾರಿಸಿ ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಇನ್ನೂ ಕಾರ್ಯಕ್ರಮದಲ್ಲಿ ಎಂಎಲ್‌ಸಿ ಅನಿಲ್ ಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ರು ಎಂದು ಮೂಲಗಳಿಂದ ತಿಳಿದು ಬಂದಿದೆ.








