Friday, July 24, 2026
spot_imgspot_img
spot_imgspot_img

ವಿಭಿನ್ನ ಬಗೆಯ ಸೀರೆಗಳು ಹಾಗೂ ವಸ್ತ್ರಗಳ ಸಂಗ್ರಹದ ಬೃಹತ್ ಮಳಿಗೆ ’ತಮನ್ವಿ ಸಿಲ್ಕ್ಸ್’ ಪುತ್ತೂರಿನಲ್ಲಿ ಶುಭಾರಂಭ!!

- Advertisement -
- Advertisement -

ಪುತ್ತೂರು: ಮೈಸೂರು ಸಿಲ್ಕ್ಸ್, ಬನಾರಸಿ, ಕಾಂಚೀಪುರಂ, ಡೈಲಿ ವೇರ್‍ ಸಾರೀಸ್ ಹಾಗೂ ಇನ್ನೂ ಹಲವು ಬಗೆಯ ಸೀರೆಗಳು ಹಾಗೂ ವಸ್ತ್ರಗಳ ಸಂಗ್ರಹಗಳನ್ನೊಳಗೊಂಡ ಬೃಹತ್ ಮಳಿಗೆ ’ತಮನ್ವಿ ಸಿಲ್ಕ್ಸ್’ ಪುತ್ತೂರಿನ ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್‍ ನಲ್ಲಿ ಉದ್ಘಾಟನೆಗೊಂಡಿತು.

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಅವರು ದೀಪ ಪ್ರಜ್ವಲಿಸಿ, ಸಂಸ್ಥೆಯ ಮಾಲಕರಾದ ಮಾಲಾಶ್ರೀ ವಿಜೇತ್ ದಂಪತಿಗೆ ಮಹಾಲಿಂಗೇಶ್ವರ ದೇವರ ಪ್ರಸಾದ ನೀಡಿ ಗೌರವಿಸಿದರು. ಸಂಸ್ಥೆಯ ಮಾಡೆಲ್ ಆಗಿ ಕಾಣಿಸಿಕೊಂಡ ಸೈಕಲಾಜಿಸ್ಟ್ ಆಂಡ್ ಆರ್ಟಿಸ್ಟ್ ಅದಿತಿ ಎಂ.ಎಸ್. ಅವರು ವಿಸ್ತತ ಮಳಿಗೆಯನ್ನು ಉದ್ಘಾಟಿಸಿದರು.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು, ಅಶೋಕ್ ಕುಮಾ‌ರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಸ್ಥಾಪಕ ಅಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ, ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷರು ಜೀವಂದರ್ ಜೈನ್, ಹಾಜಿ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ್ ಶೆಟ್ಟಿ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರು ಶಶಿ ಕುಮಾರ್ ರೈ. ಬಾಲ್ಯೋಟ್ಟು , ಎಂ.ಡಿ. ಯು ಆರ್. ಪ್ರಾಪರ್ಟೀಸ್ ನ ಉಜ್ವಲ್ ಪ್ರಭು, ಸಹಜ್.ರೈ ಬಳಜ್ಜ, ಅಕ್ಷಯ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಜಯಂತ್ ನಡುಬೈಲು, ಸುರಕ್ಷಾ ಹೆಲ್ತ್ ಸೆಂಟರ್-ವಿಟ್ಲದ ಡಾ.ಗಾಯತ್ರಿ ಗೀತಾ ಪ್ರಕಾಶ್, ಒಕ್ಕಲಿಗ ಯುವ ಸಂಘದ ಅಧ್ಯಕ್ಷ ಅಮರನಾಥ ಗೌಡ, ವಕೀಲೆ ಶ್ರೀಮತಿ ಶೈಲಜಾ ಅಮರನಾಥ್, ಖ್ಯಾತ ವಕೀಲರಾದ ಮಹೇಶ್ ಕಜೆ, ನಗರಸಭೆಯ ಮಾಜಿ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾ ಆ‌ರ್. ಗೌರಿ, ಜಗದೀಶ್ ಶೆಟ್ಟಿ, ನೆಲ್ಲಿಕಟ್ಟೆ, ಗಣೇಶ್ ಭಟ್ ಖ್ಯಾತ ಜ್ಯೋತಿಷ್ಯರು-ಕೊಲ್ಪೆ, ಎಸ್.ಡಿ.ಪಿ ರೆಮಿಡಿಸ್ ಆಂಡ್ ರಿಸರ್ಚ್ ಸೆಂಟರ್ ನ ಮ್ಯಾನೇಜಿಂಗ್ ಪಾರ್ಟ್ನರ್ ರೂಪಲೇಖ, ವಿಜಯ ಸುಪಾರಿ ಇಂಡಸ್ಟ್ರೀಸ್ ನ ಮಾಲಕ ರಾಮ್ ಭಟ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್‍ ರಾವ್, ವಕೀಲೆ ದೀಪಿಕಾ ಕಜೆ, ಸೆವೆಂತ್ ಹೆವೆನ್ ನ ದಿನಕರ ಶೆಟ್ಟಿ, ಪೆಟ್ ಪ್ಲಾನೆಟ್ ನ ಪ್ರವೀಣ್ ರಾಜ್, ಭರತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬಳಿಕ ತಮನ್ವಿ ಸಿಲ್ಕ್ಸ್ ನ ಮಾಲಕರಾದ ವಿಜೇತ್ ಅವರು ಮಾತನಾಡಿ, ಎರಡೂವರೆ ವರ್ಷದಿಂದ ಪುತ್ತೂರು ಮುಖ್ಯರಸ್ತೆಯಲ್ಲಿ ಸಂಸ್ಥೆ ನಡೆಸುತ್ತಿದ್ದು, ಸಂಸ್ಥೆಯ ಆರಂಭದ ಸಂದರ್ಭದಲ್ಲಿ ಡಾ. ಗೀತಾ ಪ್ರಕಾಶ್ ಅವರು ಇನ್ನೊಂದು ಸಂಸ್ಥೆಯ ಶೀಘ್ರ ಆರಂಭಿಸುವ ಮಾತನ್ನು ಹೇಳಿದ್ದರು. ಗ್ರಾಹಕರನ್ನು ಸೆಳೆಯಲು ನಮ್ಮಲ್ಲಿ ಆಫರ್‍ ಮೈಂಡ್ ಸೆಟ್ ಇಲ್ಲದೆ ಗುಣಮಟ್ಟ ಕಾಪಾಡುವ ಕೆಲಸ ಮಾಡಿದ್ದೇವೆ. ಯುನಿಕ್ ಕಲೆಕ್ಷನ್ ಹಾಗೂ ಕ್ವಾಲಿಟಿ ನಮ್ಮ ಗುರಿಯಾಗಿತ್ತು. ಇಂದು ಗ್ರಾಹಕರಿಗೆ ತೃಪ್ತಿಯಾಗಿದೆ ಎಂದು ಭಾವಿಸಿದ್ದೇವೆ. ನಮಗೆ ಕಟ್ಟಡದ ಸೌಲಭ್ಯ ಒದಗಿಸಿದ ಅಮರನಾಥ ಗೌಡ ಅವರು ಬಿಲ್ಡಿಂಗ್ ಓನರ್‍ ನಂತೆ ಅಲ್ಲ ನನಗೆ ಸ್ವಂತ ಅಣ್ಣನಂತೆ ಸಪೋರ್ಟ್ ಮಾಡಿದ್ದಾರೆ- ಎಂದು ಹೇಳಿದರು.

ಸಂಸ್ಥೆಯ ಮಾಲಕರಾದ ಮಾಲಾಶ್ರೀ ವಿಜೇತ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

- Advertisement -

Related news

error: Content is protected !!