- Advertisement -
- Advertisement -
ಸ್ಥಳೀಯವಾಗಿ ಅಗ್ನಿಶಾಮಕದಳ ಇಲ್ಲದ ಪರಿಣಾಮ ಜನರು ಮತ್ತಷ್ಟು ಪರದಾಟ



ವಿಟ್ಲ: ಪಡ್ನೂರು ಗ್ರಾಮದ ಪಂಜಿಗದ್ದೆ ರಸ್ತೆಯ ಬಲಿಪಗುಳಿ ಸಮೀಪದ ಗುಡ್ಡಕ್ಕೆ ಬೆಂಕಿ ತಗುಲಿದ ಪರಿಣಾಮ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

ಮಧ್ಯಾಹ್ನ ವೇಳೆಗೆ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಂಟ್ವಾಳ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯರು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಯತ್ನಿಸಿದರು. ಬೆಂಕಿಯ ಜ್ವಾಲೆ ಕಿ.ಮೀ ದೂರಕ್ಕೆ ವ್ಯಾಪ್ತಿಸಿಕೊಂಡು ಹೋಗಿದೆ. ಬಂಟ್ವಾಳದಿಂದ ಬಂದ ಅಗ್ನಿಶಾಮಕ ದಳದ ವಾಹನದಲ್ಲಿ ನೀರು ಖಾಲಿಯಾಗಿದ್ದು, ಕಾರ್ಯಾಚರಣೆ ಅರ್ಧಕ್ಕೆ ನಿಂತಿದ್ದು, ಆದರೆ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಳವಾಗಿದೆ. ಸ್ಥಳೀಯವಾಗಿ ಅಗ್ನಿಶಾಮಕ ದಳ ಠಾಣೆ ಇಲ್ಲದ ಪರಿಣಾಮ ಜನರು ಮತ್ತಷ್ಟು ಪರದಾಟ ನಡೆಸುವಂತಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ
- Advertisement -








