Tuesday, July 21, 2026
spot_imgspot_img
spot_imgspot_img

ಬೆಂಗಳೂರು: ಸಿಲಿಂಡರ್ ನಿಂದ ಅನಿಲ ಸೋರಿಕೆ – ನವದಂಪತಿ ಗಂಭೀರ ಗಾಯ

- Advertisement -
- Advertisement -

ಬೆಂಗಳೂರು : ಮನೆಯೊಂದರಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನವದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರವಿವಾರ ವರದಿಯಾಗಿದೆ.ಕೊಂಡಪ್ಪ ಲೇಔಟ್ ಮನೆಯೊಂದರಲ್ಲಿ ವಾಸವಾಗಿದ್ದ ಕೃಷ್ಣವೇಣಿ(25) ಹಾಗೂ ರಾಜು(26) ಎಂಬುವರು ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಫೆ.14ರ ರಾತ್ರಿ ಸಿಲಿಂಡರ್‌ನಿಂದ ಅನಿಲ್‌ ಸೋರಿಕೆಯಾಗಿರುವುದು ಇವರ ಗಮನಕ್ಕೆ ಬಂದಿಲ್ಲ. ಹಾಗಾಗಿ ಎಂದಿನಂತೆ ಬೆಳಗಿನ ಜಾವ 6.30ರ ಸುಮಾರಿನಲ್ಲಿ ಕೃಷ್ಣವೇಣಿ ಅವರು ಎದ್ದು ಲೈಟ್ ಹಾಕುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

ಸ್ಫೋಟದ ರಭಸಕ್ಕೆ ಮನೆಯ ಒಂದು ಭಾಗದ ಗೋಡೆ ಜಖಂಗೊಂಡಿದ್ದು, ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದು ಯಲಹಂಕ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

- Advertisement -

Related news

error: Content is protected !!