- Advertisement -
- Advertisement -
ಲಂಡನ್: ಇಂಗ್ಲೆಂಡ್ನಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ. ಇತರೆ ವೇರಿಯಂಟ್ಗಳಿಗಿಂತ ಈ ಹೊಸ ಮ್ಯೂಟಂಟ್ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ.

ಹೀಗಾಗಿ ಸದ್ಯ ಇಂಗ್ಲೆಂಡ್ನಲ್ಲಿ ಸಾಂಕ್ರಾಮಿಕ ಮಿತಿಮೀರಿದ್ದು, ನಿನ್ನೆ ಒಂದೇ ದಿನ ದಾಖಲೆಯ 35,928 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಸರ್ಕಾರ 4ನೇ ಹಂತದ ಲಾಕ್ಡೌನ್ ವಿಧಿಸಿದೆ. ಜೊತೆಗೆ ಇಂದು ತುರ್ತು ಸಭೆ ನಡೆಸಲು ಅವರು ನಿರ್ಧರಿಸಿದ್ದಾರೆ.

ಈ ವೇಳೆ ಇಂಗ್ಲೆಂಡ್ನಿಂದ ಹೋಗುವ ಹಾಗೂ ವಿದೇಶಗಳಿಂದ ಇಂಗ್ಲೆಂಡ್ಗೆ ಬರುವ ವಿಮಾನಗಳ ಸಂಚಾರ ನಿರ್ಬಂಧಿಸುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ.
ನೂತನ ಕೊರೊನಾ ವೈರಸ್ ಸೋಂಕು ಅತ್ಯಂತ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆ ಇಂಗ್ಲೆಂಡ್ನಿಂದ ಬರುವ ವಿಮಾನಗಳಿಗೆ ಈಗಾಗಲೇ ಹಲವು ದೇಶಗಳು ನಿರ್ಬಂಧ ವಿಧಿಸಿವೆ.


- Advertisement -








