


ಮಂಗಳೂರು; ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317 ಡಿ ವತಿಯಿಂದ ಮಾರ್ಚ್ 1 ರಿಂದ ಮಾರ್ಚ್ 8, ರವರೆಗೆ ವಾರಪೂರ್ತಿ ವೈವಿಧ್ಯಮಯ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳೆಯರ ಸಬಲೀಕರಣ, ಸಾಧನೆಗಳ ಗೌರವ ಹಾಗೂ ಸಮಾಜದಲ್ಲಿ ಅವರ ಮಹತ್ವವನ್ನು ಬೆಳಗಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 1 (ಭಾನುವಾರ): ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳಿಗೆ ಚಾಲನೆ
ಹೋರ್ಡಿಂಗ್ ಉದ್ಘಾಟನೆ ಪೂರ್ವಾಹ್ನ 11.00 ಗಂಟೆಗೆ ಪಿವಿಎಸ್ ವೃತ್ತದ ಬಳಿ ಮೂಲಕ
ಮಾರ್ಚ್ 2 (ಸೋಮವಾರ): ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಹ್ಯಾಶ್ ಟ್ಯಾಗ್ ರೀಲ್ಸ್ ಹಾಗೂ ಜಾಗೃತಿ ಅಭಿಯಾನ ಆರಂಭ
ಮಾರ್ಚ್ 3 (ಮಂಗಳವಾರ): ಮಧ್ಯಾಹ್ನ 1.00 ಗಂಟೆಗೆ ತಜ್ಞರಾದ ಶ್ರೀ ಕಾರ್ತಿಕ್ ಕಟೀಲ್ ಅವರ ನೇತೃತ್ವದಲ್ಲಿ ಕೆನರಾ ಕಾಲೇಜಿನಲ್ಲಿ ಸ್ವಯಂರಕ್ಷಣಾ ಕಾರ್ಯಾಗಾರ.
ಮಾರ್ಚ್ 4 (ಬುಧವಾರ): ಬೆಳಿಗ್ಗೆ 9.00 ಗಂಟೆಗೆ ಸರ್ಕಾರಿ ಗ್ರಂಥಾಲಯಕ್ಕೆ ಮಹಿಳಾ ಕೇಂದ್ರೀಯ ಪುಸ್ತಕಗಳ ದೇಣಿಗೆ
ಮಾರ್ಚ್ 5 (ಗುರುವಾರ): ಬೆಳಿಗ್ಗೆ 10.00 ಗಂಟೆಗೆ ಶ್ರೀದೇವಿ ಕಾಲೇಜಿನಲ್ಲಿ ಮನೋಆರೋಗ್ಯ ಮತ್ತು ಒತ್ತಡ ನಿರ್ವಹಣೆ ಕುರಿತು ಮನೋವಿಜ್ಞಾನ ತಜ್ಞ ಡಾ. ನಿರಂಜನ್ ಶೆಟ್ಟಿ ಅವರಿಂದ ಉಪನ್ಯಾಸ.
ಮಾರ್ಚ್ 6 (ಶುಕ್ರವಾರ): ಬೆಳಿಗ್ಗೆ 9.00 ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಗರದ ಮಹಿಳೆಯರನ್ನು ಗುರುತಿಸಿ ಸ್ಥಳದಲ್ಲೇ ಗೌರವ ಸನ್ಮಾನ.
ಮಾರ್ಚ್ 7 (ಶನಿವಾರ): ಬೆಳಿಗ್ಗೆ 10.00 ಗಂಟೆಗೆ ಬೆಸಂಟ್ ಮಹಿಳಾ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ-ಮುಖ್ಯ ಕಾರ್ಯಕ್ರಮ
ಮಾರ್ಚ್ 8 (ಭಾನುವಾರ): ಬೆಳಿಗ್ಗೆ 6.30 ಗಂಟೆಗೆ ಸಿಟಿ ಸೆಂಟರ್ ಮಾಲ್ನಲ್ಲಿ ‘ಸಾರಿ ರನ್ 2026’ ವಿಶೇಷ ಓಟ ಕಾರ್ಯಕ್ರಮ
ಈ ಎಲ್ಲಾ ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಗೌರವಿಸಿ, ಸಬಲೀಕರಿಸಿ ಹಾಗೂ ಅವರ ಸಾಧನೆಗಳನ್ನು ಸಂಭ್ರಮಿಸುವುದು ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ. ಈ ಕುರಿತು ಲಯನ್ಸ್ ಜಿಲ್ಲೆ ಮುನ್ನೂರ ಹದಿನೇಳು ಡಿ ಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಸಂಯೋಜಿಕೆ ಲಯನ್ಸ್ ಶ್ರೀಮತಿ ವಾಣಿ ವಿ ಆಳ್ವ ಹಾಗೂ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ







