ಕಡೇಶಿವಾಲಯ ಕಬಡ್ಡಿ ವೈಭವ



ಕಡೇಶಿವಾಲಯ: ಶಿವಂ ಕಡೇಶಿವಾಲಯದ ಚತುರ್ಥ ವಾರ್ಷಿಕೋತ್ಸವದ ಅಂಗವಾಗಿ ಅಂತರ್ ರಾಜ್ಯ ಮಟ್ಟದ ಆಹ್ವಾನಿತ 12 ತಂಡಗಳ ಹೊನಲು ಬೆಳಕಿನ ಪುರುಷರ ಪ್ರೊ ಮಾದರಿ ಮ್ಯಾಟ್ ಕಬಡ್ಡಿ ಪಂದ್ಯಾಟ “ಕಡೇಶಿವಾಲಯ ಕಬಡ್ಡಿ ವೈಭವ” ಮಾರ್ಚ್ 15 ಆದಿತ್ಯವಾರದಂದು ಮಧ್ಯಾಹ್ನ 2 ಗಂಟೆಯಿಂದ ಕಡೇಶಿವಾಲಯ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಅದೇ ದಿನ ಸಾಧಕರಿಗೆ ಸನ್ಮಾನ, ಆಶಕ್ತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ, ಆರೋಗ್ಯ ನಿಧಿ ವಿತರಣೆ ಹಾಗೂ ಗೃಹ ನಿರ್ಮಾಣ ಸಹಾಯಾರ್ಥ ನಿಧಿ ವಿತರಣೆ ನಡೆಯಲಿದೆ.
ಕಬಡ್ಡಿ ಪಂದ್ಯಾಟದ ಉದ್ಘಾಟನೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಅಮರನಾಥ ಅಜಿಲರು ಅರಿಕಲ್ಲು, ತಿರುಮಲೇಶ್ವರ ಭಟ್ ಪೆರ್ಲಾಪು, ಸಾಂತಪ್ಪ ಪೂಜಾರಿ ಪಚ್ಚಡಿಬೈಲು, ಗಿರಿಯಪ್ಪ ಗೌಡ ಪೆರ್ಲಾಪು, ಈಶ್ವರ ಪೂಜಾರಿ ಹಿರ್ತಡ್ಕ, ಧರ್ನಪ್ಪ ಪೂಜಾರಿ ಕನ್ನೊಟ್ಟು, ಮಾಧವ ರೈ ಅಮೈ, ಭಾಸ್ಕರ ನಾಯ್ಕ್ ಪುಣಚ ಹಾಗೂ ಪ್ರದೀಪ್ ಬೋಳಂತೂರು ಉದ್ಘಾಟಿಸಲಿದ್ದಾರೆ.
ಪ್ರಧಾನ ಸಭಾ ಕಾರ್ಯಕ್ರಮ ಸಂಜೆ 7 ಗಂಟೆಯಿಂದ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಸುಮೋಧರ ಡಿ. ಶೆಟ್ಟಿ, ನಡುಮುಗೇರುಗುತ್ತು, ಭವಾನಿ ಗ್ರೂಪ್ ಆಫ್ ಕಂಪನಿ ಮುಂಬೈ ಹಾಗೂ ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ ಶ್ರೀ ಕ್ಷೇತ್ರ ಕಡೇಶಿವಾಲಯ ವಹಿಸಲಿದ್ದಾರೆ. ಸಭೆಯನ್ನು ಧೀರಜ್ ಮುನಿರಾಜು, ರಾಜ್ಯಾಧ್ಯಕ್ಷರು, ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಕರ್ನಾಟಕ ಹಾಗೂ ಶಾಸಕರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಉದ್ಘಾಟಿಸಲಿದ್ದಾರೆ. ಸಹಾಯ ನಿಧಿ ವಿತರಣೆಯನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು, ಮಂಗಳೂರು ಲೋಕಸಭಾ ಕ್ಷೇತ್ರ ಹಾಗೂ ರಾಜೇಶ್ ನಾಯ್ಕ ಉಳಿಪ್ಪಾಡಿ, ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಾಗೂ ಪುರುಷೋತ್ತಮ ಶೆಟ್ಟಿ ನುಳಿಯಾಲುಗುತ್ತು ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಕ್ಷೇತ್ರ ಕಡೇಶಿವಾಲಯ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೋಟಾ ಶ್ರೀನಿವಾಸ್ ಪೂಜಾರಿ, ಸಂಸದರು ಉಡುಪಿ ಲೋಕಸಭಾ ಕ್ಷೇತ್ರ, ಸತೀಶ್ ಕುಂಪಲ, ಜಿಲ್ಲಾಧ್ಯಕ್ಷರು ಬಿಜೆಪಿ ದ.ಕ., ಕಿಶೋರ್ ಕುಮಾರ್ ಬೊಟ್ಯಾಡಿ, ಶಾಸಕರು ವಿಧಾನ ಪರಿಷತ್, ಕಿರಣ್ ಚಂದ್ರ ಪುಷ್ಟಗಿರಿ ಉದ್ಯಮಿಗಳು ಬೆಳ್ತಂಗಡಿ, ನಂದನ್ ಮಲ್ಯ ಜಿಲ್ಲಾಧ್ಯಕ್ಷರು ಬಿಜೆಪಿ ಯುವಮೋರ್ಚಾ ದ.ಕ., ನಟೇಶ್ ಪೂಜಾರಿ ಅನನ್ಯ ಎಂಟರ್‌ಪ್ರೈಸಸ್ ಬೆಂಗಳೂರು, ಸಹಜ್ ರೈ ಬಳಜ್ಜ ಉದ್ಯಮಿಗಳು ಹಾಗೂ ಬಿಜೆಪಿ ಪುತ್ತೂರು ಮುಖಂಡರು, ಸಂದೇಶ್ ಶೆಟ್ಟಿ ಅರೆಬೆಟ್ಟು ಅಗ್ರಜ ಡೆವಲಪರ್ಸ್ ಮಂಗಳೂರು, ಚೆನ್ನಪ್ಪ ಕೊಟ್ಯಾನ್ ಅಧ್ಯಕ್ಷರು ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ, ಶ್ರೀಕಾಂತ್ ಶೆಟ್ಟಿ ಸಜಿಪ ಉಪಾಧ್ಯಕ್ಷರು ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ, ಮಾಧವ ಮಾವೆ ಜಿಲ್ಲಾ ವಕ್ತಾರರು ಬಿಜೆಪಿ ದ.ಕ., ವಿಕಾಸ್ ಪುತ್ತೂರು ಬಿಜೆಪಿ ರಾಜ್ಯ ನಾಯಕರು, ಉದಯ್ ಕುಮಾರ್ ರಾವ್ ಬಂಟ್ವಾಳ ಗುತ್ತಿಗೆದಾರರು ಮತ್ತು ಉದ್ಯಮಿಗಳು, ರತ್ನಕುಮಾರ್ ಚೌಟ ಸಿದ್ದಕಟ್ಟೆ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಬಂಟ್ವಾಳ, ವಿಜೇಶ್ ನಾಯ್ಕ್ ನಾರ್ಯಡಿಗುತ್ತು ಸ್ಕೈ ಗ್ರೂಪ್ ಮುಡಿಪು, ಸದಾನಂದ ಪೂಜಾರಿ ಸಂಸ್ಥಾಪಕರು ನಂದಾದೀಪ ಫೌಂಡೇಶನ್ ಮಂಗಳೂರು, ಕಿರಣ್ ಕುಮಾರ್ ಕೋಡಿಕಲ್ ಕಾರ್ಪೊರೇಟರ್ ಮಂಗಳೂರು ಮಹಾನಗರಪಾಲಿಕೆ, ಡೆ.ಬಿ. ಚರಣ್ ಸ್ವಾಯನ್ ಜನರಲ್ ಮ್ಯಾನೇಜರ್ K.I.C.O.L ಪಣಂಬೂರು ಮಂಗಳೂರು, ಶಿವಪ್ರಸಾದ್ ಕೊಟ್ಟಾರಿ ಕಲ್ಲಡ್ಕ ನಿರ್ದೇಶಕರು ಮೆಕ್ ಎಕ್ಸೆಲ್ ಇಂಡಸ್ಟ್ರಿಯಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಪ್ರದೀಪ್ ಕುಮಾರ್ ಶೆಟ್ಟಿ ಅಮೈ ಕಮಲ್ ದೀಪ್ ಡೆವಲಪರ್ಸ್ ಮಂಗಳೂರು, ಉತ್ತಮ್ ಶೆಟ್ಟಿ ಬೇಂಗದಡಿ ಕೆನರಾ ಗ್ರೂಪ್ ಬೆಂಗಳೂರು, ಕೃಷ್ಣಪ್ಪ ಪೂಜಾರಿ ತೋಟ ಕಲ್ಲಡ್ಕ ಉದ್ಯಮಿಗಳು, ಕಿರಣ್ ಶೆಟ್ಟಿ ನಡ್ಯೇಲು ಯಮುನಾ ಅರ್ಥ್ ಮೂವರ್ಸ್ & ಬೋರ್ ವೆಲ್ಸ್ ಕಡೇಶಿವಾಲಯ, ರಶ್ಮಿತ್ ಶೆಟ್ಟಿ ಅಧ್ಯಕ್ಷರು ವೀರ-ವಿಕ್ರಮ ಜೋಡುಕರೆ ಕಂಬಳ ಹೊಕ್ಕಾಡಿಗೋಳಿ, ಸುಪ್ರಿತ್ ಆಳ್ವ ಅಧ್ಯಕ್ಷರು ವಾಲಿಬಾಲ್ ಅಸೋಸಿಯೇಷನ್ ಬಂಟ್ವಾಳ, ಚಿದಾನಂದ ಪೂಜಾರಿ ಬಿ.ಸಿ. ರೋಡ್ ನೋಟರಿ ಹಾಗೂ ವಕೀಲರು, ಪುಷ್ಪರಾಜ್ ಚೌಟ ಮಾಣಿ ಅಧ್ಯಕ್ಷರು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಬಂಟ್ವಾಳ, ಮಹೇಶ್ ಶೆಟ್ಟಿ ಜಡ್ತಿಲ ಬಾಲವಿಕಾಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಾಣಿ ಹಾಗೂ ದಿನೇಶ್ ಶೆಟ್ಟಿ ಬಂಬೆದಾರ್ ಅಧ್ಯಕ್ಷರು ಬಿಜೆಪಿ ಯುವಮೋರ್ಚಾ ಬಂಟ್ವಾಳ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀ ಅರ್ಜುನ್ ಭಂಡಾರ್ಕರ್ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್, ನಾಗರಾಜ ಶೆಟ್ಟಿ ಮಾಣಿ ಕಂಬಳ ಕೋಣಗಳ ಯಜಮಾನರು, ಅಧಿಕ್ ಡಿ. ಶೆಟ್ಟಿ ರಾಷ್ಟ್ರೀಯ ಗಣರಾಜ್ಯೋತ್ಸವ ಶಿಬಿರದಲ್ಲಿ ಪಾಲ್ಗೊಂಡ ಎನ್.ಸಿ.ಸಿ ಕೆಡೆಟ್ ಹಾಗೂ ನವೀನ್ ನಾಯ್ಕ್ ಬೊಳ್ಳಾರು ರಾಷ್ಟ್ರಮಟ್ಟದ ದೇಹಧಾಡ್ಯಪಟು, ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ (ರಿ)ಮಡವು ಸೇವಾ ಸಂಘಟನೆ ಅವರನ್ನು ಸನ್ಮಾನಿಸಲಾಗುತ್ತದೆ.
ಕಬಡ್ಡಿ ಪಂದ್ಯಾಟದ ಬಹುಮಾನಗಳು
ಪ್ರಥಮ – ₹30,000 &ಶಿವಂ ಟ್ರೋಫಿ
ದ್ವಿತೀಯ – ₹15,000 & ಶಿವಂ ಟ್ರೋಫಿ
ತೃತೀಯ – ₹7,000 &ಶಿವಂ ಟ್ರೋಫಿ
ಚತುರ್ಥ – ₹7,000 & ಶಿವಂ ಟ್ರೋಫಿ








