- Advertisement -
- Advertisement -
ನೆಲ್ಯಾಡಿ: ಪ್ರಸ್ತುತ ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿ ಇಲ್ಲಿ ರಾಜ್ಯಶಾಸ್ತ್ರದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮದ ನಿವಾಸಿ ಧರ್ಮರಾಯ ಬಾಲಪ್ಪ ಹವಾಲ್ದಾರ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದಿಂದ ಪಿಎಚ್‌ಡಿ ಪದವಿ ಪ್ರದಾನಿಸಲಾಗಿದೆ.“ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯದ ರಾಜಕೀಯ ಭಾಗವಹಿಸುವಿಕೆಯ ಸಮಸ್ಯೆ ಮತ್ತು ಸವಾಲುಗಳು: ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ಒಂದು ತೌಲನಿಕ ಅಧ್ಯಯನ (2010–2018)” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಅವರು ಈ ಪದವಿಯನ್ನು ಪಡೆದಿದ್ದಾರೆ.

ಈ ಸಂಶೋಧನಾ ಕಾರ್ಯವನ್ನು ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಹಂಪನಕಟ್ಟೆಯ ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ. ಶಹಬರ್ ಪಾಷಾ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಲಾಗಿದೆ. ಧರ್ಮರಾಯ ಬಾಲಪ್ಪ ಹವಾಲ್ದಾರ್ ಅವರ ಈ ಸಾಧನೆಗೆ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.



- Advertisement -








