ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿರುವ ಘಟನೆ ಮಾ.12ರಂದು ನಡೆದಿದೆ.
ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷ್ ಕುಮಾರ್ ಡಿ ಅವರ ನೇತೃತ್ವದಲ್ಲಿ ಪೊಲೀಸರು ಉಳ್ಳಾಲ ತಾಲ್ಲೂಕಿನ ಕೋಟೆಕಾರ್ ಗ್ರಾಮದ ಬಗಂಬಿಲ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿದರು. ಈ ವೇಳೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಗಳಾದ ಶೇಖ್ ಅರ್ಬಾಜ್ (29), ಕೈಕಂಬ ಕೋಡಿಬೈಲ್ ಬಾಬಾ ರಸ್ತೆ ನಿವಾಸಿ ಹಾಗೂ ರಶೀದ್ ಅಲ್ವಿನ್ (27), ಮಣಿಮುಂಡ ನಿವಾಸಿ ಅವರನ್ನು ಬಂಧಿಸಲಾಗಿದೆ.

ಪೊಲೀಸರು ಆರೋಪಿಗಳಿಂದ ಸುಮಾರು ₹51,500 ಮೌಲ್ಯದ 1 ಕೆಜಿ 110 ಗ್ರಾಂ ಗಾಂಜಾ, ₹520 ನಗದು, ರೆಡ್‌ಮಿ ಮೊಬೈಲ್ ಫೋನ್ (ಸುಮಾರು ₹8,000), ವಿವೋ ಮೊಬೈಲ್ ಫೋನ್ (ಸುಮಾರು ₹6,000) ಹಾಗೂ ಗಾಂಜಾ ಪ್ಯಾಕಿಂಗ್‌ಗೆ ಬಳಸುವ 20 ಜಿಪ್‌ಲಾಕ್ ಪಾರದರ್ಶಕ ಕವರ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ ಮತ್ತೊಬ್ಬ ಆರೋಪಿ ಅಲ್ತಾಫ್ ಎಂಬಾತ ಸ್ಕೂಟರ್ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.49/2026 ಅಡಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(c), 20(b) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.








