ಹಾಸನ: ಯುವತಿಯೊಬ್ಬಳು ವಿವಾಹ ಸಮಾರಂಭಕ್ಕೆಂದು ಹೊರಟವಳು ಬೇಲೂರು ತಾಲೂಕಿನ ಕಲ್ಕೆರೆ ಕೆರೆಯ ಬಳಿ ನಿಗೂಢವಾಗಿ ನಾಪತ್ತೆಯಾಗಿ ಆತಂಕ ಮೂಡಿಸಿದ್ದ ಪ್ರಕರಣ ಸುಖಾಂತ್ಯಗೊಂಡಿದ್ದು, ಆಕೆ ಕುಣಿಗಲ್ ನಲ್ಲಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.ಕುಣಿಗಲ್ ತಾಲೂಕಿನ ಯಲಿಯೂರಿನ ಪ್ರಿಯಾಂಕಾ(29) ನಾಪತ್ತೆಯಾಗಿದ್ದವರು.

ಇವರನ್ನು ಬಿಹಾರ ಮೂಲದ ಡೇವಿಡ್ ಎಂಬವರ ಜೊತೆ ಕುಣಿಗಲ್ ನ ಲಾಡ್ಜ್ ಒಂದರಲ್ಲಿ ಪೊಲೀಸರು ಪತ್ತೆಹಚ್ಚಿ ನಾಪತ್ತೆ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.ಘಟನೆ ವಿವರ: ಚಿಕ್ಕಮಗಳೂರಿನಲ್ಲಿ ನಡೆಯುವ ಮದುವೆಕಾರ್ಯಕ್ರಮಕ್ಕೆಂದು ಮನೆಯಲ್ಲಿ ಹೇಳಿ ಹೊರಟಿದ್ದ ಪ್ರಿಯಾಂಕಾ ಫೆ.12ರಂದು ರಾತ್ರಿ 8 ಗಂಟೆ ಸುಮಾರಿಗೆ ಬೇಲೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ಪೊಲೀಸ್ ದೂರು ನೀಡಿದ್ದರು. ಫೆ.14ರಂದು ಬೆಳಗ್ಗೆ ಕಲ್ಕೆರೆ ಕೆರೆಯ ತೀರದಲ್ಲಿ ಪ್ರಿಯಾಂಕಾರಿಗೆ ಸೇರಿದ ಉಡುಪುಗಳು ಮತ್ತು ಕೆಲವು ವೈಯಕ್ತಿಕ ವಸ್ತುಗಳು ಪತ್ತೆಯಾಗಿದ್ದವು. ಇದರಿಂದಾಗಿ ಆತಂಕ ಸೃಷ್ಟಿಯಾಗಿತ್ತು. ಪ್ರಿಯಾಂಕಾ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿ ಕೆರೆಗೆ ಎಸೆದಿರುವ ಶಂಕೆ ವ್ಯಕ್ತವಾಗಿತ್ತು.ಈ ಮಧ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೇಲೂರು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸಿದರು. ಮೊಬೈಲ್ ಲೊಕೇಶನ್ ಹಾಗೂ ಇತರ | NEW ಮಾಹಿತಿಗಳನ್ನು ಆಧರಿಸಿ ಹುಡುಕಾಟ ನಡೆಸಿ ಶಾಂಕಾರನ್ನು ಕುಣಿಗಲ್ ನಲ್ಲಿ ಪ್ರಿಯಕರನೊಂದಿಗೆ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.








