Tuesday, July 21, 2026
spot_imgspot_img
spot_imgspot_img

ಮಾ.28ರಂದು ಉಪ್ಪಿನಂಗಡಿಯಲ್ಲಿ 40ನೇ ವರ್ಷದ ವಿಜಯ–ವಿಕ್ರಮ ಜೋಡುಕರೆ ಕಂಬಳ -ಉಬಾರ್ ಕಂಬಳೋತ್ಸವ

- Advertisement -
- Advertisement -

ಪುತ್ತೂರು: ತುಳುನಾಡಿನ ಪುರಾತನ ಜಾನಪದ ಕ್ರೀಡೆಯಾದ ಕಂಬಳದ ಸಂಭ್ರಮವನ್ನು ಮತ್ತೊಮ್ಮೆ ಮೆರೆದಿಡುವ ಉದ್ದೇಶದಿಂದ ವಿಜಯ–ವಿಕ್ರಮ ಜೋಡುಕರೆ ಕಂಬಳ ಸಮಿತಿ (ರಿ.), ಉಪ್ಪಿನಂಗಡಿ ವತಿಯಿಂದ 40ನೇ ವರ್ಷದ ವಿಜಯ–ವಿಕ್ರಮ ಜೋಡುಕರೆ ಕಂಬಳವು ಮಾ.28ರಂದು ಶನಿವಾರ ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯ ಕೂಟೇಲು (ಹಳೆಗೇಟು) ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗದಲ್ಲಿ ನಡೆಯಲಿದೆ.ಕಾರ್ಯಕ್ರಮವು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ಹಾಗೂ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಸಾರಥ್ಯದಲ್ಲಿ ನಡೆಯಲಿದೆ.

ಕಂಬಳದ ಉದ್ಘಾಟನೆ ಬೆಳಿಗ್ಗೆ 9.31ಕ್ಕೆ ನಡೆಯಲಿದ್ದು, ಶ್ರೀ ಸಹಸ್ರಲಿಂಗೇಶ್ವರ ಮುಖಾತಾನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಸಭಾ ಅಧ್ಯಕ್ಷತೆ ವಹಿಸಲಿದ್ದಾರೆ.ದಿನಪೂರ್ತಿ ಕಂಬಳ ಸ್ಪರ್ಧೆಗಳು ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ ನೇಗಿಲು ಕಿರಿಯ, 11.30ಕ್ಕೆ ಸಾರಗಿಲು ಹಿರಿಯ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ 3.30ಕ್ಕೆ ಜಗ್ಗ ಉರಿಯ ಹಾಗೂ ಇತರ ಸ್ಪರ್ಧೆಗಳು ನಡೆಯಲಿದ್ದು, ಸಂಜೆ 5 ಗಂಟೆಗೆ ಕನೆಹಲಗೆ ಮತ್ತು ಅಡ್ಡ ಹಲಗೆ ಸ್ಪರ್ಧೆಗಳು ನಡೆಯಲಿವೆ. ವಿಶೇಷ ಅತಿಥಿಗಳು ಹಾಗೂ ಕಂಬಳಾಭಿಮಾನಿಗಳೊಂದಿಗೆ ವೈಭವದ ಮೆರವಣಿಗೆಯೂ ನಡೆಯಲಿದೆ.ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರುಗಳಾದ ಐವನ್ ಡಿಸೋಜ, ಕಿಶೋರ್ ಕುಮಾರ್ ಬೊಟ್ಯಾಡಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.ಇದಲ್ಲದೆ ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಪ್ರವೀಣ್ ಕುಮಾರ್, ರವೀಂದ್ರ ಶೆಟ್ಟಿ ಮಳಿಯಾಲು, ಕರುಣಾಕರ ಸುವರ್ಣ, ಶ್ರೀ ವಸಂತ ಕೆದಿಲಾಯ, ಲಿ. ಫಾ. ಜೆರಾಲ್ಡ್ ಡಿ’ಸೋಜಾ, ವಜ್ರಕುಮಾರ್ ಜೈನ್, ನಿರಂಜನ್ ರೈ ಮಠಂತಬೆಟ್ಟು, ಸುನಿಲ್ ಕುಮಾರ್ ದಡ್ಡು, ವಿದ್ಯಾಲಕ್ಷ್ಮಿ, ರಾಜೇಶ್ ಶಾಂತಿನಗರ, ದೇವಿದಾಸ್ ರೈ ಬೆಳ್ಳಿಪ್ಪಾಡಿ, ವೇಣುಗೋಪಾಲ್ ನಾಯಕ್ ಕುಂಡಾಜೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.ಕಂಬಳಾಭಿಮಾನಿಗಳು ಹಾಗೂ ಕೋಣಗಳ ಯಜಮಾನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿಜಯ–ವಿಕ್ರಮ ಜೋಡುಕರೆ ಕಂಬಳ ಸಮಿತಿ ಮನವಿ ಮಾಡಿದೆ.

- Advertisement -

Related news

error: Content is protected !!