Monday, September 14, 2026
spot_imgspot_img
spot_imgspot_img

ಆತ್ಮಹತ್ಯೆಗೆ ಯತ್ನಿಸಿದ ತಾಯಿ; 7 ವರ್ಷದ ಮಗಳಿಂದ ರಕ್ಷಣೆ!

- Advertisement -
- Advertisement -

ನವದೆಹಲಿ: ಆತ್ಮಹತ್ಯೆಗೆ ಯತ್ನಿಸಿದ 7 ವರ್ಷದ ಪುಟ್ಟ ಬಾಲಕಿ ರಕ್ಷಿಸಿದ ಮನಕಲಕುವ ಘಟನೆ ದೆಹಲಿಯಲ್ಲಿ ನಡೆದಿದೆ.

ಅಲಿಘರ್ ರೈಲ್ವೆ ನಿಲ್ದಾಣಕ್ಕೆ ರೈಲು ಇನ್ನೇನೂ ತಲುಪುವುದರಲ್ಲಿತ್ತು. ಇತ್ತ ತನ್ನ ಮಗಳ ಜೊತೆ ರೈಲಿಗಾಗಿ ಕಾಯುತ್ತಿದ್ದ ಮಹಿಳೆ ಏಕಾಏಕಿ ರೈಲು ಹಳಿಗೆ ಹಾರಿದ್ದಾಳೆ.

ತಾಯಿ ರೈಲು ಹಳಿ ಮೇಲೆ ಹಾರುತ್ತಿದ್ದಂತೆ 7 ವರ್ಷದ ಮಗಳು ಆಕೆಯ ಹಿಂದೆಯೇ ಓಡಿ ಬಂದು ’ಅಮ್ಮಾ ಸಾಯಬೇಡ’ ಎಂದು ಜೋರಾಗಿ ಕಿರುಚಿ, ಆಕೆಯನ್ನು ಹಿಂದಕ್ಕೆ ಎಳೆಯಲು ಪ್ರಯತ್ನಿಸಿದ್ದಾಳೆ. ಈ ವೇಳೆ ಕೂಗು ಕೇಳಿಸಿಕೊಂಡ ಪ್ರಯಾಣಿಕರು, ಪೊಲೀಸ್ ಅಧಿಕಾರಿಗಳು, ಸರ್ಕಾರಿ ರೈಲ್ವೇ ಪೊಲೀಸರು, ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!