Wednesday, July 22, 2026
spot_imgspot_img
spot_imgspot_img

ಕತಾರ್‌ನ ಅತಿದೊಡ್ಡ ಎಲ್‌ಎನ್‌ಜಿ ಸ್ಥಾವರದ ಮೇಲೆ ಇರಾನ್‌ ಕ್ಷಿಪಣಿ ದಾಳಿ!

- Advertisement -
- Advertisement -

ಟೆಹ್ರಾನ್: ಕತಾರ್‌ನಲ್ಲಿರುವ ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಸ್ಥಾವರದ ಮೇಲೆ ಬುಧವಾರ ತಡರಾತ್ರಿ ಇರಾನಿನ ಕ್ಷಿಪಣಿ ದಾಳಿ ನಡೆಸಿದೆ.

ಪರ್ಷಿಯನ್ ಕೊಲ್ಲಿಯಾದ್ಯಂತ ಇಂಧನ ಸೌಲಭ್ಯಗಳ ಮೇಲಿನ ದಾಳಿಗಳು ತೀವ್ರವಾಗಿ ಹೆಚ್ಚುತ್ತಿರುವ ನಡುವೆ, ವಿಶ್ವದ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ ರಫ್ತು ಸ್ಥಾವರವನ್ನು ಹೊಂದಿರುವ ಕತಾರಿ ಸಂಕೀರ್ಣವು ವ್ಯಾಪಕ ಹಾನಿಗೊಳಗಾಗಿದೆ.

ತಿಂಗಳ ಆರಂಭದಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಮೊದಲು ಜಾಗತಿಕ ಪೂರೈಕೆಯ ಐದನೇ ಒಂದು ಭಾಗದಷ್ಟು ಪಾಲನ್ನು ಹೊಂದಿದ್ದ ಎಲ್‌ಎನ್‌ಜಿ ಸ್ಥಾವರವು ರಾಸ್ ಲಫಾನ್ ಕೈಗಾರಿಕಾ ನಗರಕ್ಕೆ ನೆಲೆಯಾಗಿದ್ದು, ಇರಾನ್‌ನ 4 ಕ್ಷಿಪಣಿಗಳನ್ನು ಕತಾರ್‌ ಹೊಡೆದುರುಳಿಸಿತ್ತು. ಆದರೆ, ಒಂದು ಕ್ಷಿಪಣಿ ಸ್ಥಾವರಕ್ಕೆ ಬಡಿದಿದೆ.

ಗುರುವಾರ ಮುಂಜಾನೆ ರಾಸ್ ಲಫಾನ್ ಮೇಲೆ ನಡೆದ ದಾಳಿಯಿಂದ ವ್ಯಾಪಕ ಬೆಂಕಿ ಆವರಿಸಿದ್ದು, ಅದನ್ನು ಕತಾರ್ ಅಧಿಕಾರಿಗಳು ನಿಭಾಯಿಸುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ತೈಲ ಮತ್ತು ಅನಿಲ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸಲಾಗುತ್ತಿದೆ. ಇರಾನಿನ ದೈತ್ಯ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ದಾಳಿ ಮಾಡಿದ ನಂತರ ಕಚ್ಚಾ ಮತ್ತು ನೈಸರ್ಗಿಕ ಅನಿಲ ಬೆಲೆಗಳು ಏರಿಕೆ ಕಂಡಿವೆ. ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಹಲವಾರು ಇಂಧನ ತಾಣಗಳನ್ನು ಟಾರ್ಗೆಟ್‌ ಮಾಡಿದ್ದೇವೆಂದು ಇರಾನ್‌ ಎಚ್ಚರಿಸಿದೆ.

ಈ ಆಕ್ರಮಣವು ದೇಶದ ಸಾರ್ವಭೌಮತ್ವದ ಉಲ್ಲಂಘನೆ, ಅದರ ರಾಷ್ಟ್ರೀಯ ಭದ್ರತೆ ಮತ್ತು ಪ್ರದೇಶದ ಸ್ಥಿರತೆಗೆ ಬೆದರಿಕೆ ಒಡ್ಡಲಾಗಿದೆ ಎಂದು ಕತಾರ್‌ ಕಿಡಿಕಾರಿದ್ದು, ಇರಾನಿನ ಮಿಲಿಟರಿ ಮತ್ತು ಭದ್ರತಾ ಅಧಿಕಾರಿಗಳು ಹಾಗೂ ಅಂಗಸಂಸ್ಥೆ ಸಿಬ್ಬಂದಿಗೆ 24 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಕತಾರ್‌ ಖಡಕ್‌ ಆದೇಶ ಹೊರಡಿಸಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!