Thursday, July 23, 2026
spot_imgspot_img
spot_imgspot_img

ಬೆಳಗಾವಿ: ಗ್ಯಾಸ್ ಸಿಲಿಂಡರ್ ಕೊರತೆ; ಸಾಲದ ಒತ್ತಡದಿಂದ ಹೊಟೇಲ್ ಮಾಲೀಕ ಆತ್ಮಹತ್ಯೆ

- Advertisement -
- Advertisement -

ಬೆಳಗಾವಿ : ವಾಣಿಜ್ಯ ಗ್ಯಾಸ್ ಸಿಲಿಂಡ‌ರ್ ಕೊರತೆ ಹಾಗೂ ಸಾಲದ ಒತ್ತಡದಿಂದ ಮನನೊಂದು ಹೊಟೇಲ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಹುಕ್ಕೇರಿ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ‘ಹನುಮಾನ್’ ಹೊಟೇಲ್ ನಡೆಸುತ್ತಿದ್ದ ರಾಮ ಹಳ್ಳೂರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಕೆಲವು ದಿನಗಳಿಂದ ವಾಣಿಜ್ಯ ಸಿಲಿಂಡರ್‌ ಸಿಗದ ಹಿನ್ನೆಲೆ ಅವರು ಹೊಟೇಲ್ ಬಂದ್‌ ಮಾಡಿದ್ದರು ಎಂದು ತಿಳಿದುಬಂದಿದೆ.

ಹೊಟೇಲ್ ಬಂದ್ ಆಗಿದ್ದರಿಂದ ಆದಾಯ ಕಡಿಮೆಯಾಗಿದ್ದು, ಇದರಿಂದ ಹಣಕಾಸಿನ ವ್ಯವಹಾರಗಳಲ್ಲಿ ಏರುಪೇರು ಉಂಟಾಗಿದ್ದರ ಜೊತೆಗೆ ಸಾಲದ ಬಡ್ಡಿ ಒತ್ತಡ ಹೆಚ್ಚಾದ ಕಾರಣ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!