ರಾಜೀವ್ ಶೆಟ್ಟಿ ಎಡ್ತೂರು ವಿರುದ್ದ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳ ಛಾಯಾಗ್ರಾಹಕರ ಸಂಘ ತೀವ್ರ ಆಕ್ರೋಶ
ಕ್ಷಮೆ ಕೇಳುವಂತೆ ಆಗ್ರಹ




ವೇಣೂರು ಕಂಬಳ ಕಾರ್ಯಕ್ರಮದಲ್ಲಿ ನಿರೂಪಕರಿಂದ ಛಾಯಾಗ್ರಾಹಕರ ವೃತ್ತಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪದಬಳಕೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತು ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳ ಛಾಯಾಗ್ರಾಹಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇತ್ತೀಚೆಗೆ ವೇಣೂರು ಕಂಬಳ ಕಾರ್ಯಕ್ರಮದಲ್ಲಿ ನಿರೂಪಕರಾಗಿರುವ ರಾಜೀವ್ ಶೆಟ್ಟಿ ಎಡ್ತೂರು ಎಂಬವರು ಛಾಯಗ್ರಾಹಕರ ವೃತ್ತಿಯ ಬಗ್ಗೆ ತೀರಾ ಅಪಮಾನ ಮತ್ತು ಅಗೌರವಗಳಿಂದ ಕೂಡಿದ ಮಾತುಗಳನ್ನಾಡಿದ್ದು , ಎಲ್ಲರ ವ್ಯಾಟ್ಸಾಪ್ ಮತ್ತು ದೃಶ್ಯ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದ್ದೆ. ಈ ಬಗ್ಗೆ ಛಾಯಗ್ರಾಹಕರು ಎಲ್ಲರೂ ತೀವ್ರ ಅಸಮಧಾನಗೊಂಡಿದ್ದು ಈಗಾಗಲೇ ಮೊಬೈಲ್ ಮತ್ತು ಆಧುನಿಕ ತಂತ್ರಜ್ಞಾನ ದುರುಪಯೋಗದಿಂದ ವೃತ್ತಿನಿರತ ಛಾಯಗ್ರಾಹಕರ ವೃತ್ತಿಗೆ ತೊಂದರೆಯಾಗಿರುವ ಸಂದರ್ಭದಲ್ಲಿ, ಇಂತಹ ಅಸಂಬದ್ದ ಮಾತುಗಳಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡಿದ್ದು, ಸಮಾಜದೊಂದಿಗೆ ಉತ್ತಮ ಭಾಂದವ್ಯವನ್ನು ಇಟ್ಟುಕೊಂಡಿರುವ ಛಾಯಗ್ರಾಹಕರ ವೃತ್ತಿಯನ್ನು ಹೀನಾಯವಾಗಿ ಸಾರ್ವಜನಿಕವಾಗಿ ಹಿಯಾಳಿಸಿರುವ ಮತ್ತು ಬಾಯಿಚಪಲಕ್ಕಾಗಿ ಬೇರೆ ವೃತ್ತಿಯನ್ನು ಸಾರ್ವಜನಿಕ ವೇದಿಕೆಯಲ್ಲಿ ತೀರಾ ಕೆಳಮಟ್ಟದಲ್ಲಿ, ಗೌರವಯುತವಾದ ಕಂಬಳದ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ರಾಜೀವ ಶೆಟ್ಟಿಯವರನ್ನು ಕಂಬಳ ಸಮಿತಿಯಿಂದ ತೆಗೆದು ಹಾಕಬೇಕು ಮತ್ತು ಅವರು ನಾಡಿನ ಸಮಸ್ತ ಛಾಯಗ್ರಾಹಕರಲ್ಲಿ ತಕ್ಷಣ ಬಹಿರಂಗವಾಗಿ ಕ್ಷಮೆಕೇಳಬೇಕು.
ನಮ್ಮ ಈ ಬೇಡಿಕೆಗೆ ತಕ್ಷಣ ಸ್ಪಂದನೆ ಸಿಗದಿದ್ದಲ್ಲಿ ಉಭಯ ಜಿಲ್ಲೆಯ ಛಾಯಗ್ರಾಹಕರಿಂದ ರಾಜೀವ ಶೆಟ್ಟಿಯವರು ನಿರೂಪಣೆ ಮಾಡುವ ಮುಂದಿನ ಕಂಬಳಗಳಲ್ಲಿ ತೀವ್ರ ತರಹದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳ ಛಾಯಾಗ್ರಾಹಕರ ಸಂಘ, ಕಂಬಳ ಸಮಿತಿಯ ರಾಜ್ಯಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಅವರಿಗೆ ಮನವಿ ಮಾಡಿದ್ದಾರೆ.








