Tuesday, July 21, 2026
spot_imgspot_img
spot_imgspot_img

ಬ್ರಹ್ಮಾವರ: ಭಜನೆ ತರಬೇತುದಾರ ಯುವಕ ಹೃದಯಾಘಾತದಿಂದ ನಿಧನ

- Advertisement -
- Advertisement -

ಬ್ರಹ್ಮಾವರ: ಖ್ಯಾತ ಭಜನೆ ತರಬೇತುದಾರ ಯುವಕನೊಬ್ಬ ಸ್ವಗೃಹದಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಡೂರು ಎಂಬಲ್ಲಿ ನಡೆದಿದೆ.

ಪ್ರಕಾಶ್ ಕುಲಾಲ್ (35) ಮೃತ ಯುವಕ . ಪ್ರಕಾಶ್ ಅವರು ಸೋಮವಾರ ಸಂಜೆ ಭಜನಾ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮಲಗಿದ್ದರು. ಬೆಳಿಗ್ಗೆ ಅವರಿಗೆ ಆತ್ಮೀಯರೊಬ್ಬರು ಕರೆ ಮಾಡಿದಾಗ ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ಮನೆಯ ಮಾಡಿನ ಹಂಚು ತೆಗೆದು ಒಳಗೆ ಹೋಗಿ ನೋಡಿದಾಗ ಪ್ರಕಾಶ್ ಅವರು ಮಲಗಿದ್ದಲ್ಲೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಪ್ರಕಾಶ್ ಕುಲಾಲ್ ಅತಿದೊಡ್ಡ ಭಜನಾ ಕಾರ್ಯಕ್ರಮಗಳಲ್ಲಿ ಒಂದಾದ ಸಂಕೀರ್ತನ ಮಂದಾರ್ತಿ ಸೇರಿ ಹತ್ತು ಹಲವು ಕಡೆಗಳಲ್ಲಿ ತಮ್ಮನ್ನು ಭಜನೆಗಾಗಿ ಸಮರ್ಪಿಸಿಕೊಂಡ ಯುವಕ. ಯಾವುದೇ ಹಣ ಅಥವಾ ಇತರ ಫಲಾಪೇಕ್ಷೆಗಳಿಲ್ಲದೆ ಭಜನಾ ತರಬೇತಿ ನೀಡುತ್ತಿದ್ದರು. ತನ್ನ ಹೆಚ್ಚಿನ ಸಮಯವನ್ನು ಭಜನೆಗಾಗಿ ಮೀಸಲಿಡುತ್ತಿದ್ದರು.

ಮೃತರು ಪತ್ನಿ, ಮಗು ಮತ್ತು ಪೋಷಕರನ್ನು ಅಗಲಿದ್ದಾರೆ.

- Advertisement -

Related news

error: Content is protected !!