Wednesday, July 22, 2026
spot_imgspot_img
spot_imgspot_img

ವಿಠ್ಠಲ್ ಜೇಸೀಸ್ ಶಾಲೆ: ಸ್ನೇಹ ಸಂಭ್ರಮ 2026ರ ಸಮಾರೋಪ

- Advertisement -
- Advertisement -

ವಿಟ್ಲ : ವಿಟ್ಲ ಬಸವನ ಗುಡಿಯಲ್ಲಿರುವ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸ್ಕೌಟ್ಸ್ ಆಂಡ್ ಗೈಡ್ಸ್ ವಿಭಾಗದ 3 ದಿನಗಳ ಬೇಸಿಗೆ ಶಿಬಿರ ಸ್ನೇಹಸಂಭ್ರಮ- 2026 ರ ಸಮಾರೋಪ ಸಮಾರಂಭ ದಿನಾಂಕ 2.4.2026ರಂದು ನಡೆಯಿತು.

ಶಿಬಿರಗಳು ಕ್ರಿಯಾಶೀಲತೆ ಮತ್ತು ಜೀವನ ಕ್ರಮಗಳನ್ನು ಕಲಿಸುತ್ತದೆ, ಅಳವಡಿಸಿಕೊಳ್ಳುವ ಮನಸು ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕೋಶಾಧಿಕಾರಿಗಳಾದ ಪ್ರಭಾಕರ ಶೆಟ್ಟಿ ದಂಬೆಕಾನರವರು ತಿಳಿ ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೆ. ಟಿ. ಆನಂದ ಅಧ್ಯಕ್ಷರು, ಯುವ ವಾಹಿನಿ ವಿಟ್ಲ ಘಟಕ ಇವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರನೀಡಿ ಗೌರವಿಸಿದರು.

ಶ್ರೀ ಸತ್ಯಸಾಯಿ ಅಳಿಕೆ ವಿದ್ಯಾ ಸಂಸ್ಥೆಯ ಸ್ಕೌಟ್ ಮಾಸ್ಟರ್ ನಾರಾಯಣ ನಾಯಕ್, ದ.ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ, ಚಂದಳಿಕೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ, ಅಳಕೆಮಜಲು ಶಾಲೆಯ ಮುಖ್ಯೋಪಾಧ್ಯಾಯರಾದ ಇಸ್ಮಾಯಿಲ್, ಪ್ರಾಂಶುಪಾಲ ಜಯರಾಮ ರೈ , ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ, ವಿಠಲ ಪ್ರೌಢಶಾಲೆ ಗೈಡ್ಸ್ ಕ್ಯಾಪ್ಟನ್ ವೀಣಾದೇವಿ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆಡಳಿತ ಅಧಿಕಾರಿ ರಾಧಾಕೃಷ್ಣ ಸ್ವಾಗತಿಸಿದರು. ಕುಮಾರಿ ಸಾತ್ವಿಕ ಪ್ರಾರ್ಥಿಸಿದರು.

ಸಂಸ್ಥೆಯ ಗೈಡ್ ಕ್ಯಾಪ್ಟನ್ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕಿ ಶ್ರೀಮತಿ ಶಶಿಕಲಾ ಸಹಕರಿಸಿದರು.

- Advertisement -

Related news

error: Content is protected !!