ನೆಲ್ಯಾಡಿ: ವಿವಿಶ್ವವಿದ್ಯಾನಿಲಯ ಕಾಲೇಜು, ನೆಲ್ಯಾಡಿಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಶುಕ್ರವಾರ ಪೂರ್ವಾಹ್ನ 11.00 ಗಂಟೆಗೆ ಸ. ಹಿ. ಪ್ರಾ ಶಾಲೆ ಹಳ್ಳಿಂಗೇರಿಯಲ್ಲಿ ನೆರವೇರಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನವಾಜ್, ಅಧ್ಯಕ್ಷರು ಎಸ್ಡಿ ಎಂಸಿ ಎನ್‌ಎಸ್‌ಎಸ್ ಅವರು, ಯುವಜನರಲ್ಲಿ ಸಮಾಜ ಸೇವೆಯ ಮನೋಭಾವ ಬೆಳೆಸುವ ಪ್ರಮುಖ ವೇದಿಕೆಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿ.ವಿ. ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಅವರು ಮಾತನಾಡಿ, ಎನ್‌ಎಸ್‌ಎಸ್ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತಿನ, ಸೇವಾಭಾವದ ಹಾಗೂ ನಾಯಕತ್ವ ಗುಣಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಷಾ ಅಂಚನ್ (ಅಧ್ಯಕ್ಷರು, ಅನುಷ್ಠಾನ ಸಮಿತಿ) ಅವರು ‘ಎನ್ಎನ್ಎಸ್ ಗ್ರಾಮಾಭಿವೃದ್ಧಿ ವಿಷಯಗಳನ್ನು ತಿಳಿದುಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರ್ವಹಿಸಲು ಸಹಕಾರಿ. ವಿದ್ಯಾರ್ಥಿಗಳ ಈ ರೀತಿಯ ಕಲಿಕೆಯೊಂದಿಗೆ ಶಿಬಿರ ಸಂಪೂರ್ಣಗೊಳ್ಳಲಿ ಎಂದು ಹಾರೈಸಿದರು. ಶ್ರೀ ಉಮ್ಮರ್ ಬೈಲಂಗಡಿ, ಗೌರವ ಅಧ್ಯಕ್ಷರು, NSS ಸ್ವಾಗತ ಸಮಿತಿ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದು ವಿಶೇಷ ಶಿಬಿರಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ರೊನಾಲ್ಡ್ ಕೆನ್ಯೂಟ್ ಮೆನೇಜಸ್, ಮುಖ್ಯಶಿಕ್ಷಕರು, ಸ.ಹಿ.ಪ್ರಾ. ಶಾಲೆ, ಹಳ್ಳಿಂಗೇರಿ ಅವರು ಶುಭಾಶಯ ಸಂದೇಶ ನೀಡಿದರು.ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಶ್ರೀ ಶಶಿರಾಜ್, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ NSS ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿದ್ದರು. ಕಾರ್ಯಕ್ರಮವು ಶಿಸ್ತಿನಿಂದ ಯಶಸ್ವಿಯಾಗಿ ನೆರವೇರಿತು.








