Sunday, July 19, 2026
spot_imgspot_img
spot_imgspot_img

10 ದಿನಗಳ ಚಂದ್ರಯಾನದ ಬಳಿಕ ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಆರ್ಟೆಮಿಸ್‌ II ಗಗನಯಾತ್ರಿಗಳು

- Advertisement -
- Advertisement -

ವಾಷಿಂಗ್ಟನ್: ಐತಿಹಾಸಿಕ 10 ದಿನಗಳ ಚಂದ್ರಯಾನದ ನಂತರ ನಾಸಾದ ಆರ್ಟೆಮಿಸ್ II ಗಗನಯಾತ್ರಿಗಳು ಭೂಮಿಗೆ ಮರಳಿದ್ದಾರೆ. ಆರ್ಟೆಮಿಸ್ II ರ ಗಗನಯಾತ್ರಿಗಳು ಪೆಸಿಫಿಕ್‌ ಸಾಗರದಲ್ಲಿ ಸುರಕ್ಷಿತವಾಗಿ ಇಳಿದರು.

ಸುಮಾರು 50 ವರ್ಷಗಳ ಬಳಿಕ ಚಂದ್ರನತ್ತ ಪ್ರಯಾಣ ಮಾಡಿ, 10 ದಿನಗಳ ಸುತ್ತಾಟ ನಡೆಸಿ ಭೂಮಿಗೆ ವಾಪಸ್‌ ಆಗುವ ನಾಸಾ ಯೋಜನೆ ‘ಆರ್ಟಿಮಿಸ್‌ 2’ ಯಶಸ್ವಿಯಾಗಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತು ಸಾಗಿದ್ದ ಓರಿಯನ್‌ ನೌಕೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಇಂದು ಮುಂಜಾನೆ 5:37ರ ಸುಮಾರಿಗೆ ಇಳಿಯಿತು. ಗಗನಯಾತ್ರಿಗಳು ಕ್ಯಾಪ್ಸುಲ್‌ನಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್ ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಅವರು ಮಾಕ್ 33 – ಅಥವಾ ಶಬ್ದದ ವೇಗಕ್ಕಿಂತ 33 ಪಟ್ಟು ವೇಗದಲ್ಲಿ ಪ್ರಯಾಣಿಸುತ್ತಾ ಭೂಮಿಯ ವಾತಾವರಣದಲ್ಲಿ ಲ್ಯಾಂಡ್‌ ಆಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!