
ದಾವಣಗೆರೆ : ಹರಿಹರದ ವೀರಶೈವ ಲಿಂಗಾಯತಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಯನ್ನು ಗುರುಪೀಠದ ಟ್ರಸ್ಟ್‌ನ ಮುಖಂಡರು ಪದಚ್ಯುತಿಗೊಳಿಸಿದ್ದಾರೆ.
ಮಠದಲ್ಲಿ ಸೋಮವಾರ ನಡೆದ ಸಭೆಯಲ್ಲಿ 15 ಟ್ರಸ್ಟಿಗಳ ಪೈಕಿ 13 ಟ್ರಸ್ಟಿಗಳು ಸ್ವಾಮೀಜಿಗಳ ಪದಚ್ಯುತಿಗೆ ನಿರ್ಣಯ ಕೈಗೊಂಡಿದ್ದಾರೆ.ಮಠದ ಭಕ್ತರಿಂದ ಲೆಕ್ಕ ಕೊಡಿ ಅಭಿಯಾನ:ಮಠದ ಒಳಗೆ ಟ್ರಸ್ಟಿಗಳ ಸಭೆ ನಡೆಸುತ್ತಿದ್ದರೆ, ಹೊರಗಡೆ ಮಠದ ಭಕ್ತರಿಂದ ಲೆಕ್ಕ ಕೊಡಿ ಅಭಿಯಾನ ನಡೆಯಿತು. ಈ ವೇಳೆ ಮಠದ ಆವರಣದಲ್ಲಿ ಭಾರಿ ಹೈಡ್ರಾಮ ನಡೆಯಿತು. ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ನೇತೃತ್ವದಲ್ಲಿ ಮಠದ ಭಕ್ತರು ಲೆಕ್ಕ ಕೊಡಿ ಎಂದು ಮಠದ ಟ್ರಸ್ಟಿಗಳನ್ನು ಆಗ್ರಹಿಸಿದರು.ಅಭಿಯಾನದ ವೇಳೆ ಮಠದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಈ ಸಂಬಂಧ ಪ್ರತಿಕ್ರಿಯಿಸಿರುವ ವಚನಾನಂದ ಸ್ವಾಮೀಜಿ, ‘ನನ್ನ ಉಚ್ಚಾಟನೆ ಹಾಸ್ಯಾಸ್ಪದ. ಟ್ರಸ್ಟ್‌ನವರಿಗೆ ಲೆಕ್ಕ ಕೊಡಿ ಎಂದು ಕೇಳಿದ್ದಕ್ಕೆ ನನ್ನ ಟಾರ್ಗೆಟ್ ಮಾಡಿದ್ದಾರೆ. ವ್ಯವಸ್ಥಿತ ಷಡ್ಯಂತ್ರ ಮಾಡಿ ಉಚ್ಛಾಟನೆ ಮಾಡಿದ್ದಾರೆ. ಭಕ್ತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.








