Friday, July 31, 2026
spot_imgspot_img
spot_imgspot_img

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 60 ರೂ. ಏರಿಕೆ

- Advertisement -
- Advertisement -

ನವದೆಹಲಿ: ನಿರೀಕ್ಷೆಯಂತೆ ಯುದ್ಧದ ಬಿಸಿ ದೇಶಕ್ಕೂ ತಟ್ಟಿದೆ. ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ದರ 60 ರೂ. ಏರಿಕೆಯಾದರೆ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ದರ 115 ರೂ. ಏರಿಕೆಯಾಗಿದೆ. ಪರಿಷ್ಕೃತ ದರ ಶನಿವಾರದಿಂದಲೇ ಜಾರಿಗೆ ಬಂದಿದೆ. ದರ ಏರಿಕೆಯಿಂದ ಹೋಟೆಲ್‌, ರೆಸ್ಟೋರೆಂಟ್‌, ಸಣ್ಣ ವಾಣಿಜ್ಯ ಸಂಸ್ಥೆಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ.

ದರ ಏರಿಕೆಗೂ ಮೊದಲು ಬೆಂಗಳೂರಿನಲ್ಲಿ ಗೃಹ ಬಳಕೆಯ ಸಿಲಿಂಡರ್‌ ದರ 855.50 ರೂ. ಇತ್ತು. ಈಗ ಇದು 915.50 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ 913 ರೂ., ಮುಂಬೈನಲ್ಲಿ 912.50 ರೂ., ಚೆನ್ನೈನಲ್ಲಿ 928.50 ರೂ.ಗೆ ಏರಿಕೆಯಾಗಿದೆ. ಏಪ್ರಿಲ್ 2025 ರಿಂದ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪರಿಷ್ಕರಣೆಯಾಗಿರಲಿಲ್ಲ.

- Advertisement -

Related news

error: Content is protected !!