Sunday, July 19, 2026
spot_imgspot_img
spot_imgspot_img

ಬಿರಿಯಾನಿ, ಕಲ್ಲಂಗಡಿ ತಿಂದು ಒಂದೇ ಕುಟುಂಬದ ನಾಲ್ವರು ಸಾವು..!

- Advertisement -
- Advertisement -

ಮುಂಬೈ : ಮುಂಬೈನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಬಿರಿಯಾನಿ ಹಾಗೂ ಕಲ್ಲಂಗಡಿ ಸೇವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಅಬ್ದುಲ್ಲಾ ಡೋಕಾಡಿಯಾ(40), ಅವರ ಪತ್ನಿ ನಸೀನ್ ಡೋಕಾಡಿಯಾ(35), ಅವರ ಪುತ್ರಿಯರಾದ ಆಯಿಶಾ(16) ಹಾಗೂ ಜೈನಾಬ್(13) ಮೃತಪಟ್ಟವರು.

ಏಪ್ರಿಲ್ 25ರಂದು ರಾತ್ರಿ ಸುಮಾರು 10:30ಕ್ಕೆ ಸಂಬಂಧಿಕರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಒಟ್ಟಾಗಿ ಬಿರಿಯಾನಿ ಊಟ ಮಾಡಿದ್ದರು. ಊಟದ ನಂತರ ಸಂಬಂಧಿಕರು ತಮ್ಮ ಮನೆಗಳಿಗೆ ಮರಳಿದ್ದರು. ಆದರೆ ಅಬ್ದುಲ್ಲಾ ಅವರ ಕುಟುಂಬದ ನಾಲ್ವರು ಸದಸ್ಯರು ತಡರಾತ್ರಿ 1 ಗಂಟೆಯ ಬಳಿಕ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು ಎಂದು ತಿಳಿದುಬಂದಿದೆ.

ಏಪ್ರಿಲ್ 26 ರ ಮುಂಜಾನೆ 5:30 ರ ಸುಮಾರಿಗೆ ನಾಲ್ವರಿಗೂ ತೀವ್ರ ವಾಂತಿ ಮತ್ತು ಬೇಧಿ ಶುರುವಾಗಿದೆ. ತಕ್ಷಣ ಅವರನ್ನು ಕುಟುಂಬ ವೈದ್ಯರ ಬಳಿ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ನಾಲ್ವರೂ ಕೊನೆಯುಸಿರೆಳೆದಿದ್ದಾರೆ. ಇವರ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ತನಿಖೆಯಲ್ಲಿ ತಿಳಿಯಬೇಕಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!