Friday, April 26, 2024
spot_imgspot_img
spot_imgspot_img

ಕಾರಿನ ಟೈರ್ ಸ್ಫೋಟಗೊಂಡು ತಾಯಿ ಮಗ ದಾರುಣ ಸಾವು!

- Advertisement -G L Acharya panikkar
- Advertisement -

ಮೈಸೂರು: ಟೈರ್ ಸ್ಫೋಟಗೊಂಡು ಕಾರಿನಲ್ಲಿದ್ದ ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೃತರನ್ನು ದೈವಿಕ್ (12) ಮತ್ತು ಗುಣಲಕ್ಷ್ಮೀ (35) ಎನ್ನಲಾಗಿದೆ.

ಕಾರಿನ ಮುಂಭಾಗದ ಟೈರ್​ಗಳು ಸ್ಫೋಟಗೊಂಡಾಗ ಕಾರು ಕಂಬಕ್ಕೆ ಗುದ್ದಿದೆ. ಈ ವೇಳೆ ತಾಯಿ ಮತ್ತು ಮಗ ಕಾರಿನಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಪತಿ ಜಗದೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪೂಜೆಗೆಂದು ಕುಟುಂಬವು ಕುಶಾಲನಗರಕ್ಕೆ ತೆರಳಿದ್ದು, ಅಲ್ಲಿಂದ ಪೂಜೆ ಮುಗಿಸಿ ಮೈಸೂರಿಗೆ ವಾಪಸ್ಸು ಬರುವಾಗ ಕಾರಿನ ಟೈರ್​ಗಳು ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದೆ. ಈ ಘಟನೆ ಬಗ್ಗೆ ಮೈಸೂರಿನ ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!