Thursday, July 23, 2026
spot_imgspot_img
spot_imgspot_img

ಹೈಕೋರ್ಟ್ ತೀರ್ಪು: ಮಹೇಶ್ ಶೆಟ್ಟಿ ಅರ್ಜಿ ವಜಾ, AI ಮಾನಹಾನಿ ಪ್ರಕರಣಕ್ಕೆ ಸರ್ಕಾರ-ಸೋಶಿಯಲ್ ಮೀಡಿಯಾಗಳಿಗೆ ನೋಟಿಸ್

- Advertisement -
- Advertisement -

ಬೆಂಗಳೂರು: ಗಡಿಪಾರು ಆದೇಶ ಪ್ರಶ್ನಿಸಿದ್ದ ಮಹೇಶ್‌ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಏ.30ರಂದು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ಸಚಿನ್ ಶಂಕ‌ರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಗಡಿಪಾರು ಆದೇಶ ಪ್ರಶ್ನಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರ ಅರ್ಜಿ ವಜಾಗೊಳಿಸಿ, ಗಡಿಪಾರು ಪ್ರಶ್ನಿಸಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಸರ್ಕಾರದ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದು. ಹೀಗಾಗಿ ರಿಟ್ ಅರ್ಜಿ ಊರ್ಜಿತವಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ.ಇದೇ ವೇಳೆ ಗಡೀಪಾರು ಸಂಬಂಧ 2 ವಾರ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.

ನೋಟಿಸ್‌ ಜಾರಿ: ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ವಿರುದ್ದ ಕೃತಕ ಬುದ್ದಿಮತ್ತೆ (ಎಐ) ಬಳಕೆ ಮಾಡಿ ಮಾನಹಾನಿ ಉಂಟು ಮಾಡುವ ಫೋಟೊ ಮತ್ತು ಕಂಟೆಂಟ್‌ ಸೃಷ್ಟಿಸಿ ಹಂಚಿಕೆ ಮಾಡುವುದನ್ನು ನಿರ್ಬಂಧಿಸುವಂತೆ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರಕಾರ, ಗೂಗಲ್, ಮೆಟಾ (ಫೇಸ್‌ಬುಕ್), ವಾಟ್ಸಾಪ್, ಇನ್‌ಸ್ಟಾಗ್ರಾಂ ವೇದಿಕೆಗಳಿಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ಧರ್ಮಸ್ಥಳ ಪರ ವಕೀಲ ಎಸ್‌. ರಾಜಶೇಖರ್ ವಾದ ಮಂಡಿಸಿದರು.

- Advertisement -

Related news

error: Content is protected !!