Tuesday, July 21, 2026
spot_imgspot_img
spot_imgspot_img

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರುಣನ ಕೃಪೆಗಾಗಿ ವಿಶೇಷ ಸೀಯಾಳಾಭಿಷೇಕ

- Advertisement -
- Advertisement -


ವಿಟ್ಲ: ಲೋಕಕಲ್ಯಾಣ ಹಾಗೂ ಉತ್ತಮ ಮಳೆಯಾಗಲೆಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೇ 11ರಂದು ವಿಶೇಷ ಸೀಯಾಳಾಭಿಷೇಕ ಕಾರ್ಯಕ್ರಮ ನಡೆಯಲಿದೆ.
ದೇವಸ್ಥಾನದ ವತಿಯಿಂದ ಪ್ರಕಟಗೊಂಡ ಮಾಹಿತಿಯಂತೆ, ಸೋಮವಾರ ಬೆಳಿಗ್ಗೆ 9.30 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶ್ರೀ ಪಂಚಲಿಂಗೇಶ್ವರ ದೇವರಿಗೆ ಸೀಯಾಳಾಭಿಷೇಕ ನೆರವೇರಿಸಲಾಗುವುದು. ವರುಣನ ಕೃಪೆಗಾಗಿ ಹಾಗೂ ಸಮಸ್ತ ಜನರ ಒಳಿತಿಗಾಗಿ ಈ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಭಕ್ತಾದಿಗಳು ಸೀಯಾಳ ತಂದು ಸಮರ್ಪಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಅನುವಂಶಿಕ ಮೊತ್ತೇಸರರಾದ ಬಂಗಾರು ಅರಸರು ವಿನಂತಿಸಿದ್ದಾರೆ.

- Advertisement -

Related news

error: Content is protected !!