Friday, August 14, 2026
spot_imgspot_img
spot_imgspot_img

ಕುಟ್ರುಪ್ಪಾಡಿ: ಕೊಲ್ಯದಕಟ್ಟ ಡ್ಯಾಂ ಬಳಿ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರ ದುರ್ಮರಣ

- Advertisement -
- Advertisement -

ಕಡಬ: ರಜೆ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ನದಿಗೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಶುಕ್ರವಾರ ಸಂಜೆ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಡ್ಯಾಂ ಸಮೀಪದ ಗುಂಡ್ಯ ಹೊಳೆಯಲ್ಲಿ ನಡೆದಿದೆ.ಮೃತ ವಿದ್ಯಾರ್ಥಿನಿಯರು ಕಾರ್ಕಳದ ವಿಮಲಗಿರಿ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ರಜೆ ದಿನವನ್ನು ಸಂಭ್ರಮಿಸಲು ಸ್ನೇಹಿತರ ತಂಡದೊಂದಿಗೆ ನದಿಗೆ ಆಗಮಿಸಿದ್ದ ಅವರು, ಸಂಜೆ ಸುಮಾರು 3.30ರ ವೇಳೆಗೆ ಸ್ನಾನಕ್ಕೆ ನೀರಿಗೆ ಇಳಿದಿದ್ದರು ಎನ್ನಲಾಗಿದೆ.ಈ ವೇಳೆ ನೀರಿನ ಆಳದ ಬಗ್ಗೆ ಅರಿವಿಲ್ಲದೆ ಇಬ್ಬರೂ ಮುಳುಗತೊಡಗಿದ್ದು, ಜೊತೆಯಲ್ಲಿದ್ದವರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.ವಿಷಯ ತಿಳಿದ ತಕ್ಷಣ ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು.

- Advertisement -

Related news

error: Content is protected !!