Wednesday, July 22, 2026
spot_imgspot_img
spot_imgspot_img

2021ರಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮತೀಯ ಗಲಭೆ ಹಾಗೂ ದರೋಡೆ ಸಂಚು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಜಾರಿಯಾಗಿದ್ದ NBW ತಪ್ಪಿಸಿಕೊಂಡು 2021ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಂಗಳೂರಿನ ಬಂಗ್ರಕೂಳೂರು, ರಾಯಿಕಟ್ಟೆ ನಿವಾಸಿ ಬಿಜು @ ವಿಜಯ್ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಕಾವೂರು ಹಾಗೂ ಉರ್ವ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು ಎರಡು NBW ವಾರಂಟ್‌ಗಳು ಬಾಕಿ ಇವೆ.

ಆರೋಪಿಯ ವಿರುದ್ಧದ 02 NBW ವಾರಂಟ್ ಗಳು:
ಕಾವೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 125/2021 ಕಲಂ 427,295(ಎ),120(ಬಿ), 212 ಜತೆಗೆ 34 ಐ.ಪಿ.ಸಿ
ಉರ್ವ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 75/2021 ಕಲಂ. 505,295(ಎ),153(ಎ),426,143,149,295 ಐ.ಪಿ.ಸಿ

ಈ ಮೇಲ್ಕಂಡ ಪ್ರಕರಣಗಳಲ್ಲಿ ಆರೋಪಿ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ಆರೋಪಿಯ ವಿರುದ್ಧ ಈ ಕೆಳಕಂಡಂತೆ ಒಟ್ಟು ದಾಖಲಾದ ಪ್ರಕರಣಗಳು:

1) ಕಾವೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 125/2021 ಕಲಂ 427,295(ಎ),120(ಬಿ), 212 ಜತೆಗೆ 34 ಐ.ಪಿ.ಸಿ.
2) ಉರ್ವ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 75/2021 ಕಲಂ. 505,295(ಎ),153(ಎ),426,143,149,295 ಐ.ಪಿ.ಸಿ.
3) ಪಣಂಬೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 89/2016 ಕಲಂ. 120(ಬಿ), 115,399,400,511 ಭಾ.ದಂ.ಸಂ. ಮತ್ತು 20,25,27 ಇಂಡಿಯನ್ ಆರ್ಮ್ಸ್ ಕಾಯಿದೆ
4) ಉತ್ತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 65/2018 ಕಲಂ. 379 ಐ.ಪಿ.ಸಿ.
5) ಕಾವೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 10/2018 ಕಲಂ 27 (ಬಿ) ಎನ್.ಡಿ.ಪಿ.ಎಸ್. ಕಾಯ್ದೆ.

ಬಂಧಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!