Saturday, May 4, 2024
spot_imgspot_img
spot_imgspot_img

ಮಧ್ಯ ಪ್ರಿಯರಿಗೆ ಶಾಕ್ ನೀಡಿದ ತಜ್ಞರ ವರದಿ!!

- Advertisement -G L Acharya panikkar
- Advertisement -

ನವದೆಹಲಿ(ನ.2): ದೇಶದಾದ್ಯಂತ ಲಾಕ್ ಡೌನ್ ತೆರವಾಗುತ್ತಿದ್ದಂತೆಯೇ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿತ್ತು. ಕೊರೊನಾ ಸೋಂಕು ಬರುವುದಿಲ್ಲಾ ಅಂತ ಹಬ್ಬಿದ ಗಾಳಿ ಸುದ್ದಿಯ ಬೆನ್ನಲ್ಲೇ ಹಲವು ಮದ್ಯ ಸೇವೆನೆ ಮಾಡಿದರೆ ಕೊರೊನಾ ಸೋಂಕು ಬರೋದೆ ಇಲ್ಲಾ ಅಂತಾನೂ ನಂಬಿದ್ದರು. ಆದರೆ ಈಗ ಮದ್ಯ ಸೇವೆನೆ ಮಾಡಿದ್ರೆ ಕೊರೊನಾ ವೈರಸ್ ನಿಂದ ಅಪಾಯ ಎದುರಾಗಲಿದೆ ಅಂತಾ ತಜ್ಞರು ವರದಿಯನ್ನು ನೀಡಿದ್ದಾರೆ.

ದೇಶದದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿರುವವರ ಪೈಕಿ ಬಹುತೇಕ ಮಂದಿ ಲಿವರ್ ಸಮಸ್ಯೆ ಕಾಣಿಸಿಕೊಂಡಿತ್ತು. ಅದರಲ್ಲೂ ಮದ್ಯಪಾನ ಸೇವನೆಯಿಂದ ಲಿವರ್ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಕೊರೊನಾ ವೈರಸ್ ಸೋಂಕಿನ ಕಾಲದಲ್ಲಿ ಮದ್ಯಪಾನದಿಂದ ಸಾಧ್ಯವಾದಷ್ಟು ದೂರವಿರಿ ಅಂತಾ ಸಲಹೆ ನೀಡಿದ್ದಾರೆ. ಮದ್ಯ ಸೇವನೆ ಮಾಡುವವರಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುವುದರಿಂದ ಆದಷ್ಟು ಎಚ್ಚರಿಕೆಯಿಂದ ಇರುವಂತೆಯೂ ತಜ್ಞರು ಹೇಳುತ್ತಿದ್ದಾರೆ.ಕೊರೊನಾ ಸೋಂಕಿನಿಂದ ದೂರವಿರಬಹುದು ಅನ್ನೋ ಕಾರಣಕ್ಕೆ ಮದ್ಯಪಾನ ಮಾಡುತ್ತಿದ್ದ ಮಂದಿಗೆ ಇದೀಗ ತಜ್ಞರ ವರದಿ ಶಾಕ್ ಕೊಟ್ಟಿದೆ.

- Advertisement -

Related news

error: Content is protected !!