- Advertisement -
- Advertisement -
ಮಡಿಕೇರಿ, ಮೇ 12: ಜೀಪೊಂದು ಪ್ರಪಾತಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ


.


ಕಣ್ಣನೂರು ನಿವಾಸಿ ಬಾಲಕೃಷ್ಣನ್ (50) ಅಪಘಾತದಲ್ಲಿ ಮೃತಪಟ್ಟವರು. ಸೋಮವಾರ ರಾತ್ರಿ ವಿರಾಜಪೇಟೆಯಿಂದ ಕೇರಳ ರಾಜ್ಯದ ಕಣ್ಣೂರಿಗೆ ತೆರಳುತ್ತಿದ್ದಾಗ ಜೀಪು ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಮಗುಚಿ ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಬಾಲಕೃಷ್ಣನ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಪೆರಂಬಾಡಿ ಚೆಕ್ ಪೋಸ್ಟ್‌ನಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಪ್ರಪಾತದಲ್ಲಿ ಜೀಪು ಸಹಿತ ಬಾಲಕೃಷ್ಣನ್ ಅವರ ಮೃತದೇಹ ಪತ್ತೆಯಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
- Advertisement -







