Sunday, July 19, 2026
spot_imgspot_img
spot_imgspot_img

ಯುವ ಜನಾಂಗವನ್ನು ಕೋಮು ಸಂಘರ್ಷಕ್ಕೆ ಪ್ರೇರೇಪಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಬಹು ಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳ ಮೇಲೆ ಚೆಲ್ಲಾಟ ಆಡುತ್ತಿರುವುದು ಇಡೀ ಹಿಂದೂ ಸಮಾಜಕ್ಕೆ ಮಾರಕ- ಶ್ರೀ ಅರುಣ್ ಕುಮಾರ್ ಪುತ್ತಿಲ

- Advertisement -
- Advertisement -

ಪ್ರಸ್ತುತ ನ್ಯಾಯಾಲಯದಲ್ಲಿರುವ ಹಿಜಾಬ್ ವಿವಾದವನ್ನು ಅನುಷ್ಠಾನಗೊಳಿಸಿ ಮುಸ್ಲಿಮರ ಓಲೈಕೆಗೆ ಮುಂದಾದ ಕಾಂಗ್ರೆಸ್ ಸರ್ಕಾರ
ಇಡೀ ರಾಜ್ಯದಲ್ಲಿ ವಿವಾದವನ್ನು ತಂದು ಕೊಟ್ಟಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೋಮು ಭಾವನೆಯನ್ನ ಬಿತ್ತಿರುವ ಹಿಜಾಬ್ ವಿವಾದವು ಮತ್ತೆ ಮುನ್ನಲೆಗೆ ಬಂದಿದ್ದು ಸರ್ಕಾರ ಮತ್ತೆ ಶಿಕ್ಷಣ ಸಂಸ್ಥೆ ಯಲ್ಲಿ ಹಿಜಾಬ್ ಧರಿಸಲು ಒಪ್ಪಿಗೆ ಸೂಚಿಸಿ ಅದ್ಯಾದೇಶ ಹೊರಡಿಸಿದೆ.

ಈ ಪ್ರಕರಣ ಕೋರ್ಟನಲ್ಲಿ ವಿಚಾರಣೆಯಲ್ಲಿರುವ ಹಂತ ದಲ್ಲಿ ಮತ್ತೆ ಸರ್ಕಾರ ವಿವಾದವನ್ನು ಕೆದಕುವ ಕೆಲಸ ಮಾಡಿದೆ. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ಮತ ವಿಭಜನೆಯಾಗಿದ್ದು ಕಾಂಗ್ರೆಸ್ ಪಕ್ಷ ಈ ಘಟನೆ ಮುಂದಿನ ಚುನಾವಣೆಯಲ್ಲಿ ಮರುಕಳಿಸದಂತೆ ಈ ನಿರ್ಧಾರ ಕೈಗೊಂಡಿದ್ದು ಇದು ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಕೇಸರಿ ಶಾಲು ಹಾಕಲು ನಿರ್ಬಂಧ ಮಾಡಿರುವುದು ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ನೋವು ತಂದಿದೆ.

ಹಿಜಾಬ್ ಇಸ್ಲಾಂನ ಅವಿಬಾಜ್ಯ ಅಂಗ ಎಂದು ಎಲ್ಲಿಯೂ ಉಲ್ಲೇಖ ಇಲ್ಲ ಆದರೆ ಹಿಂದೂಗಳಲ್ಲಿ ಜನಿವಾರ ಮತ್ತು ರುದ್ರಾಕ್ಷಿ ಮತ್ತು ಕೇಸರಿ ಶಾಲು ನಂಬಿಕೆಯ ಆಧಾರದಲ್ಲಿ ಅನುಷ್ಠಾನದಲ್ಲಿದೆ. ಸರ್ಕಾರ ದ ಈ ದೋರಣೆ ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಜೀವನದಲ್ಲಿ ಮಾರಕವಾಗಿ ಪರಿಣಾಮ ಬೀರಲಿದೆ ಮತ್ತೆ ಸರ್ಕಾರ ದ ಈ ನಡೆ ವಿವಾದವನ್ನು ಸೃಷ್ಟಿ ಮಾಡುವಲ್ಲಿ ಯಾವುದೇ ಸಂದೇಹ ಇಲ್ಲ. ಸರ್ಕಾರ ಮತ್ತೆ ಈ ಆದೇಶವನ್ನು ಹಿಂತೆಗೆಯಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ವಿವಾದಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

- Advertisement -

Related news

error: Content is protected !!