Sunday, September 13, 2026
spot_imgspot_img
spot_imgspot_img

ವಿಟ್ಲ ಕಲ್ಲಡ್ಕ ಭಾಗದಲ್ಲಿ ಎಂಟು ರೌಂಡ್ ಹಾರಾಡಿದ ವಿಮಾನ-ಸಾರ್ವಜನಿಕರಲ್ಲಿ ಆತಂಕ- ಕುತೂಹಲ…

- Advertisement -
- Advertisement -

ವಿಟ್ಲ: ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ IX2924 (ಬೋಯಿಂಗ್ 737 MAX 8) ವಿಮಾನವು ಗುರುವಾರ ಸಂಜೆ ವಿಟ್ಲ–ಕಲ್ಲಡ್ಕ ಪರಿಸರದ ಆಕಾಶದಲ್ಲಿ ಕೆಲಕಾಲ ವೃತ್ತಾಕಾರದಲ್ಲಿ ಸುತ್ತಾಡಿದ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಯಿತು.

ಬೆಂಗಳೂರಿನಿಂದ ಹೊರಟಿದ್ದ ಈ ವಿಮಾನವು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು. ಆದರೆ ಮಂಗಳೂರು ಭಾಗದಲ್ಲಿ ಮಳೆ, ಗಾಳಿ ಹಾಗೂ ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ವಿಮಾನಕ್ಕೆ ತಕ್ಷಣ ಲ್ಯಾಂಡಿಂಗ್ ಅನುಮತಿ ಸಿಗದೆ, ಏರ್ ಟ್ರಾಫಿಕ್ ಕಂಟ್ರೋಲ್ (ATC) ಸೂಚನೆಯಂತೆ ವಿಮಾನವು ವಿಟ್ಲ ಭಾಗದ ಆಕಾಶದಲ್ಲಿ ಸುಮಾರು 2,650 ಅಡಿ ಎತ್ತರದಲ್ಲಿ ‘ಹೋಲ್ಡಿಂಗ್ ಪ್ಯಾಟರ್ನ್’ನಲ್ಲಿ ಸುತ್ತಾಡಿತು.ಫ್ಲೈಟ್ ರಾಡಾರ್ ಅಪ್ಲಿಕೇಶನ್‌ನಲ್ಲೂ ವಿಮಾನವು ಒಂದೇ ಪ್ರದೇಶದಲ್ಲಿ ವೃತ್ತಾಕಾರದಲ್ಲಿ ಸಂಚರಿಸುತ್ತಿರುವುದು ದಾಖಲಾಗಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿರಬಹುದು ಎಂದು ಭಾವಿಸಿ ಆತಂಕ ವ್ಯಕ್ತಪಡಿಸಿದರು.ಆದರೆ, ಇದು ಸಂಪೂರ್ಣವಾಗಿ ಸಾಮಾನ್ಯ ವಾಯುಯಾನ ಪ್ರಕ್ರಿಯೆಯಾಗಿದ್ದು, ಯಾವುದೇ ತಾಂತ್ರಿಕ ದೋಷ ಅಥವಾ ತುರ್ತು ಪರಿಸ್ಥಿತಿ ಇರಲಿಲ್ಲ ಎಂದು ತಿಳಿದು ಬಂದಿದೆ.

ಹವಾಮಾನ ಅನುಕೂಲಕರವಾದ ಬಳಿಕ ವಿಮಾನವು ಮೂಡಬಿದಿರೆ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣದತ್ತ ತೆರಳಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.ಮಂಗಳೂರು ಕರಾವಳಿ ಭಾಗದಲ್ಲಿ ಮಳೆ ಹಾಗೂ ಗಾಳಿ ಹೆಚ್ಚಿರುವ ಸಂದರ್ಭಗಳಲ್ಲಿ ಸುರಕ್ಷತಾ ಕಾರಣಕ್ಕಾಗಿ ವಿಮಾನಗಳನ್ನು ಕೆಲಕಾಲ ಆಕಾಶದಲ್ಲೇ ಕಾಯಿಸುವ ಪದ್ಧತಿಯನ್ನು ‘ಹೋಲ್ಡಿಂಗ್ ಪ್ಯಾಟರ್ನ್’ ಎಂದು ಕರೆಯಲಾಗುತ್ತದೆ. ಇದೇ ರೀತಿ ಇನ್ನೂ ಎರಡು ವಿಮಾನಗಳು ಸಹ ಸುರಕ್ಷಿತವಾಗಿ ಇಳಿದಿರುವ ಮಾಹಿತಿ ಲಭ್ಯವಾಗಿದೆ.ಹೀಗಾಗಿ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೇ ಆತಂಕಪಡಬಾರದು ಎಂದು ವಾಯುಯಾನ ತಜ್ಞರು ತಿಳಿಸಿದ್ದಾರೆ.

- Advertisement -

Related news

error: Content is protected !!