Wednesday, July 22, 2026
spot_imgspot_img
spot_imgspot_img

ಬೆಂಗಳೂರು ಮಲ್ಟಿಪಲ್ ಕನ್ವೆನ್ಷನ್ ನಲ್ಲಿ ಲಯನ್ ಚಂದ್ರಹಾಸ ರೈ ಗೆ ‘Best District LCIF coordinator’ ಪ್ರಶಸ್ತಿ

- Advertisement -
- Advertisement -

2024-25 ನೇ ಸಾಲಿನಲ್ಲಿ ಡಿಸ್ಟ್ರಿಕ್ಟ್ ಎಲ್ ಸಿ ಐ ಎಫ್ ಕೋಆರ್ಡಿನೇಟರ್‍(District LCIF coordinator) ಆಗಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಮಂಗಳೂರು ಕುಡ್ಲ ಕ್ಲಬ್ ನ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಜಿಲ್ಲಾ ಸಂಪುಟದ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಲಯನ್ ಚಂದ್ರಹಾಸ ರೈರವರಿಗೆ ಬೆಂಗಳೂರಿನಲ್ಲಿ ನಡೆದ ಮಲ್ಟಿಪಲ್ ಕನ್ವೆನ್ಷನ್ ನಲ್ಲಿ ’ಬೆಸ್ಟ್ ಡಿಸ್ಟ್ರಿಕ್ಟ್ ಎಲ್ ಸಿ ಐ ಎಫ್ ಕೋಆರ್ಡಿನೇಟರ್‍’(Best District LCIF coordinator) ಆಗಿ ಮಲ್ಟಿಪಲ್ ಅವಾರ್ಡ್ ಲಭಿಸಿದೆ.

ಪ್ರಶಸ್ತಿಯನ್ನು 24-25 ನೇ ಸಾಲಿನ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಆಗಿರುವ ಲಯನ್ ಡಾಕ್ಟರ್ ಕೃಷ್ಣೇಗೌಡ ನೀಡಿದರು. ಈ ಸಂದರ್ಭದಲ್ಲಿ 317d ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಉಪಸ್ಥಿತರಿದ್ದರು ಎಂದು ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಪತ್ರಿಕಾ ಮಾಧ್ಯಮದವರಿಗೆ ತಿಳಿಸಿದ್ದಾರೆ.

- Advertisement -

Related news

error: Content is protected !!