Monday, July 27, 2026
spot_imgspot_img
spot_imgspot_img

ಫ್ರೆಂಡ್ಸ್ ಟ್ರಸ್ಟ್ ಚೆಯರ್ಮನ್ ಆಗಿ ಝಕರಿಯಾ ಜೋಕಟ್ಟೆ, ಕಾರ್ಯಾಧ್ಯಕ್ಷರಾಗಿ ಸುಜಾಹ್ ಮಹಮ್ಮದ್ ಪುನರಾಯ್ಕೆ

- Advertisement -
- Advertisement -

ಮಂಗಳೂರು: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ದ್ವೈವಾರ್ಷಿಕ ಮಹಾಸಭೆಯು ಭಾನುವಾರ ಸಂಜೆ ಅಡ್ಯಾರ್ ಹಿಲ್ಸ್‌ನಲ್ಲಿ ನಡೆಯಿತು. ಸಭೆಯಲ್ಲಿ 2026-28ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಝಕರಿಯಾ ಜೋಕಟ್ಟೆ ಅವರು ಚೆಯರ್ಮನ್ ಆಗಿ ಹಾಗೂ ಸುಜಾಹ್ ಮಹಮ್ಮದ್ ಅವರು ಕಾರ್ಯಾಧ್ಯಕ್ಷರಾಗಿ ಪುನರಾಯ್ಕೆಯಾದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಝಕರಿಯಾ ಜೋಕಟ್ಟೆ, ಸಂಸ್ಥೆಯ ಬೆಳವಣಿಗೆ ಅದರ ಸದಸ್ಯರ ನಡವಳಿಕೆ ಮತ್ತು ಒಗ್ಗಟ್ಟಿನ ಮೇಲೆ ಅವಲಂಬಿತವಾಗಿದೆ. ಎಲ್ಲರನ್ನು ಒಗ್ಗೂಡಿಸಿ ಸಮಾನ ಮನೋಭಾವದಿಂದ ಕಾರ್ಯನಿರ್ವಹಿಸಿದ ಕಾರಣ ಎಂ.ಫ್ರೆಂಡ್ಸ್ ನಿರಂತರವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಸಂಸ್ಥೆಯ ವಿವಿಧ ಯೋಜನೆಗಳಿಂದ ಸಾವಿರಾರು ಫಲಾನುಭವಿಗಳು ಪ್ರಯೋಜನ ಪಡೆದು ಆಶೀರ್ವದಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.ಕಾರ್ಯಾಧ್ಯಕ್ಷ ಸುಜಾಹ್ ಮಹಮ್ಮದ್ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಸಮಾಜಮುಖಿ ಯೋಜನೆಗಳ ಕುರಿತು ವಿವರಿಸಿದರು.

ಸಭೆಯಲ್ಲಿ ಎನ್ನಾರೈ ಸದಸ್ಯರಾದ ಶರೀಫ್ ವೈಟ್ ಸ್ಟೋನ್, ಮಹಮ್ಮದ್ ಫಾರೂಕ್ ಜುಬೈಲ್, ಮುಹ್ಸಿನ್ ಮೊಯ್ದಿನ್, ಅಶ್ರಫ್ ಬರಕಾ, ಹಾರಿಸ್ ಕಾನತ್ತಡ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನ್ಯಾಯವಾದಿಯಾಗಿ ಉತ್ತೀರ್ಣರಾದ ಹಕೀಮ್ ಕಲಾಯಿ ಅವರನ್ನು ಸನ್ಮಾನಿಸಲಾಯಿತು.ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರಿಫ್ ಪಡುಬಿದ್ರಿ ವಾರ್ಷಿಕ ವರದಿ ವಾಚಿಸಿದರೆ, ಕೋಶಾಧಿಕಾರಿ ಝುಬೈರ್ ಬುಳೇರಿಕಟ್ಟೆ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಡಾ. ಮುಬಶ್ಶಿರ್ ಸ್ವಾಗತಿಸಿದರು.

ಅನ್ವರ್ ಹುಸೈನ್ ವಂದಿಸಿದರು. ಶೇಖ್ ಇಸಾಕ್ ಕಾರ್ಯಕ್ರಮ ನಿರೂಪಿಸಿದರು.

ನೂತನ ಪದಾಧಿಕಾರಿಗಳ ಪಟ್ಟಿ: ಚೆಯರ್ಮನ್ – ಝಕರಿಯಾ ಜೋಕಟ್ಟೆ, ಕಾರ್ಯಾಧ್ಯಕ್ಷ – ಸುಜಾಹ್ ಮಹಮ್ಮದ್, ಪ್ರಧಾನ ಕಾರ್ಯದರ್ಶಿ – ಮಹಮ್ಮದ್ ಆರಿಫ್ ಪಡುಬಿದ್ರಿ, ಕೋಶಾಧಿಕಾರಿ – ಝುಬೈರ್ ಬುಳೇರಿಕಟ್ಟೆ, ಉಪಾಧ್ಯಕ್ಷರು – ಡಾ. ಮುಬಶ್ಶಿರ್, ವಿ.ಎಚ್. ಅಶ್ರಫ್, ಅಬೂಬಕರ್ ಪುತ್ತು, ಜೊತೆ ಕಾರ್ಯದರ್ಶಿಗಳು – ಶೇಖ್ ಇಸಾಕ್ ಎಡ್ವಕೇಟ್ ಹಾಗೂ ಅನ್ವರ್ ಹುಸೈನ್.ಇದೇ ವೇಳೆ ಕಾರುಣ್ಯ ಯೋಜನೆ, ಕಂಪ್ಯೂಟರ್ ಬಸ್, ಕ್ಲಾತ್ ಬ್ಯಾಂಕ್, ಜಮಾಅತ್ ಸಮೀಕ್ಷೆ ಹಾಗೂ ಮೆಡಿಕಲ್ ವೆಲ್‌ನೆಸ್ ಯೋಜನೆಗಳಿಗೆ ಪ್ರತ್ಯೇಕ ಉಪಸಮಿತಿಗಳನ್ನು ರಚಿಸಲಾಯಿತು.

- Advertisement -

Related news

error: Content is protected !!