






ವಿಟ್ಲ :ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಅಭಿಯಾನದ ಭಾಗವಾಗಿ ಸಿದ್ಧಿವಿನಾಯಕ ಯುವಕ ಮಂಡಲದ ವತಿಯಿಂದ ಮನೆಮನೆಗೆ ತೆರಳಿ ಉಚಿತ ಕೈ ಚೀಲ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಸಿದ್ದಿವಿನಾಯಕ ಯುವಕ ಮಂಡಲದ ಸದಸ್ಯರು ಪ್ರತಿ ಮನೆಗೂ ಭೇಟಿ ನೀಡಿ, ಏಕಬಾರಿ ಬಳಕೆಯ ಪ್ಲಾಸ್ಟಿಕ್ ಚೀಲಗಳ ಬದಲು ಪ್ಲಾಸ್ಟಿಕ್ ರಹಿತ ಚೀಲಗಳನ್ನು ಬಳಸುವಂತೆ ಜಾಗೃತಿ ಮೂಡಿಸಿದರು. ಈ ವೇಳೆ ಸುಮಾರು 300ಕ್ಕಿಂತ ಹೆಚ್ಚು ಮನೆಗಳಿಗೆ ಭೇಟಿಯನ್ನು ನೀಡಿ ಉಚಿತವಾಗಿ ಗಟ್ಟಿಮುಟ್ಟಾದ ಕೈ ಚೀಲಗಳನ್ನು ವಿತರಿಸಲಾಯಿತು.

ಉದ್ದೇಶ:
ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವುದು, ನಿತ್ಯಬಳಕೆಯಲ್ಲಿ ಮರುಬಳಕೆ ಮಾಡಬಹುದಾದ ಚೀಲಗಳ ಬಳಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು . ಪ್ಲಾಸ್ಟಿಕ್ ಚೀಲಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕೂ ಯುವಕ ಮಂಡಲ ಆದ್ಯತೆ ನೀಡಿತು.
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಸ್ಥಳೀಯರು ಸಹ ಈ ಉಪಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿ, ಮಂಡಲದ ಕಾರ್ಯವನ್ನು ಶ್ಲಾಘಿಸಿದರು.








