Monday, June 22, 2026
spot_imgspot_img
spot_imgspot_img

ಪೆರುವಾಯಿ–ಪೇರಡ್ಕ ಸೇತುವೆ ಬಳಿ ಜೂ.22ರಂದು ರಸ್ತೆ ತಡೆ ಹಾಗೂ ಪ್ರತಿಭಟನೆ

- Advertisement -
- Advertisement -

ವಿಟ್ಲ: ಕೇರಳ–ಕರ್ನಾಟಕ ಸಂಪರ್ಕ ರಸ್ತೆಯ ನೂತನ ಸೇತುವೆ ನಿರ್ಮಾಣ, ರಸ್ತೆ ಅಗಲೀಕರಣ, ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ವರ್ಗಾವಣೆ ಹಾಗೂ ಅಪಾಯಕಾರಿಯಾದ ಹಳೆಯ ಸೇತುವೆಗಳಲ್ಲಿ ತಕ್ಷಣ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಜೂನ್ 22ರಂದು ರಸ್ತೆ ತಡೆ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಬೆಳಿಗ್ಗೆ 9.30 ಗಂಟೆಗೆ ಪೆರುವಾಯಿ–ಪೇರಡ್ಕ ಸೇತುವೆ ಬಳಿ ನಡೆಯಲಿರುವ ಪ್ರತಿಭಟನೆಯಲ್ಲಿ ಕೇರಳ–ಕರ್ನಾಟಕ ಗಡಿ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!