ಕಂಬಳಬೆಟ್ಟು: ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಂಬಳಬೆಟ್ಟಿನಲ್ಲಿ ಜೂನ್ 18ರಂದು ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ ನಡೆಯಿತು.ಪೀಪಲ್ ಫಾರ್ ಪೀಪಲ್ ಸಂಸ್ಥೆಯ ಸಹಕಾರದೊಂದಿಗೆ ನೀಡಲಾದ ಜಾರುಬಂಡಿ ಹಾಗೂ ಮಕ್ಕಳ ಆಟೋಪಕರಣಗಳನ್ನು ಕನ್ನಡ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಉದ್ಘಾಟಿಸಿದರು. ಕೆ.ಕೆ. ಅಶ್ರಫ್ ಶಾಂತಿನಗರ ಅವರು ಕೊಡುಗೆಯಾಗಿ ನೀಡಿದ ಎಲ್‌ಕೆಜಿ ಸ್ಮಾರ್ಟ್ ಕ್ಲಾಸ್‌ಗೆ ಸಹಕಾರಿಯಾಗುವ ಟಿವಿಯನ್ನು ಮಾಸ್ಟರ್ ಹಾನಿಹ್ ಉದ್ಘಾಟಿಸಿದರು.ಎಸ್‌ಎಲ್‌ವಿ ಬುಕ್ ಹೌಸ್ ಸಂಸ್ಥೆಯ ಮಾಲಕ ದಿವಾಕರ ದಾಸ್ ನೇರ್ಲಾಜೆ ಅವರು ಶಾಲೆಯ 100 ವಿದ್ಯಾರ್ಥಿಗಳಿಗೆ ಒಂದು ವರ್ಷದ ಬರವಣಿಗೆಗೆ ಅಗತ್ಯವಾದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದು, ಅವುಗಳನ್ನು ವಿತರಿಸಲಾಯಿತು.
ಹಕೀಮ್ ಶಾಂತಿನಗರ ಅವರು ಕೊಡುಗೆಯಾಗಿ ನೀಡಿದ ಎಲ್‌ಕೆಜಿ ವಿದ್ಯಾರ್ಥಿಗಳ ಗುರುತು ಚೀಟಿಗಳನ್ನು ವಿತರಿಸಲಾಯಿತು. ಬಾತಿಶ್ ಅಳಕೆಮಜಲು ಅವರು ಎಲ್‌ಕೆಜಿ ವಿದ್ಯಾರ್ಥಿಗಳಿಗೆ ಆಟೋಪಕರಣಗಳನ್ನು ನೀಡಿ ಶಾಲೆಗೆ ಹಸ್ತಾಂತರಿಸಿದರು. ಇಸ್ಮಾಯಿಲ್ ಹಾಜಿ ಬದ್ರಿಯಾ ಅವರ ವತಿಯಿಂದ ನೀಡಲಾದ ಶಾಲಾ ಸಮವಸ್ತ್ರಗಳನ್ನೂ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಕೊಡುಗೆ ನೀಡಿದ ಗಣ್ಯರನ್ನು ಶಾಲಾ ವಿದ್ಯಾವರ್ಧಕ ಸಂಘ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ವತಿಯಿಂದ ಗೌರವಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಮೀದ್ ಕೆ.ಎಸ್., ಕಂಬಳಬೆಟ್ಟು ಕ್ಲಸ್ಟರ್ ಸಿಆರ್‌ಪಿ ಜ್ಯೋತಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶ್ರೀಪತಿ ನಾಯಕ್ ಡಿ. ಸ್ವಾಗತಿಸಿದರು. ಗೌರವ ಶಿಕ್ಷಕಿ ನಿಹಾನ ವಂದಿಸಿದರು. ಶಿಕ್ಷಕಿ ಅಕ್ಷತಾ ಕೆ. ಕಾರ್ಯಕ್ರಮ ನಿರೂಪಿಸಿದರು.ವಿದ್ಯಾವರ್ಧಕ ಸಮಿತಿ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಆಶ್ರಫ್ ಸಿಎಚ್., ಕಾರ್ಯದರ್ಶಿ ಬದ್ರುದ್ದೀನ್ ವಿ.ಕೆ., ಕೋಶಾಧಿಕಾರಿ ಯಾಸಿರ್ ಕಂಬಳಬೆಟ್ಟು, ಕಾರ್ಯದರ್ಶಿ ಸುಮಿತ್ ಶೆಟ್ಟಿ ಮುಡಾಯಿಮಾರ್, ಅಬ್ದುಲ್ ಗಫೂರ್ ಹಾಗೂ ಶಾಲಾ ಶಿಕ್ಷಕರಾದ ಜರಪ್ರಭ ಕೆ., ನವ್ಯಶ್ರೀ, ಭಾಗ್ಯಲಕ್ಷ್ಮಿ ಮತ್ತು ಮುಬೀನ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.








