Monday, June 22, 2026
spot_imgspot_img
spot_imgspot_img

ಬಾಕಿ ಟ್ರಾಫಿಕ್ ದಂಡಕ್ಕೆ 50% ರಿಯಾಯಿತಿ; ಜೂ.21 ರಿಂದ ಜುಲೈ 10ರವರೆಗೆ ಅವಕಾಶ

- Advertisement -
- Advertisement -

ಮಂಗಳೂರು: ವಾಹನ ಸವಾರರಿಗೆ ರಾಜ್ಯ ಸರ್ಕಾರ ಮಹತ್ವದ ರಿಯಾಯಿತಿ ಘೋಷಿಸಿದ್ದು, ಮೇ 2026ರವರೆಗೆ ದಾಖಲಾಗಿರುವ ಬಾಕಿ ಸಂಚಾರ ಇ-ಚಲನ್‌ಗಳ ದಂಡವನ್ನು 50% ರಿಯಾಯಿತಿಯೊಂದಿಗೆ ಪಾವತಿಸಲು ಅವಕಾಶ ನೀಡಲಾಗಿದೆ. ಈ ವಿಶೇಷ ಸೌಲಭ್ಯವು ಜೂನ್ 21ರಿಂದ ಜುಲೈ 10, 2026ರವರೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಬಾಕಿ ಇರುವ ಸಂಚಾರ ದಂಡವನ್ನು ಅರ್ಧ ಮೊತ್ತ ಪಾವತಿಸುವ ಮೂಲಕ ವಾಹನ ಮಾಲೀಕರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.

ರಾಜ್ಯದಾದ್ಯಂತ ಬಾಕಿ ಉಳಿದಿರುವ ಇ-ಚಲನ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ದಂಡಗಳನ್ನು ನಿಗದಿತ ಅವಧಿಯೊಳಗೆ ಪಾವತಿಸಿ, ರಿಯಾಯಿತಿಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮ ಪಾಲನೆಗೆ ಸಹಕರಿಸುವಂತೆ ಕರೆ ನೀಡಿದ್ದಾರೆ.

ತಡಮಾಡದೆ ಬಾಕಿ ದಂಡ ಪಾವತಿಸಿ, 50% ರಿಯಾಯಿತಿಯ ಲಾಭ ಪಡೆಯಿರಿ”

- Advertisement -

Related news

error: Content is protected !!