Thursday, October 22, 2026
spot_imgspot_img
spot_imgspot_img

100 ರೂ.ಗಾಗಿ ಕೊಲೆ ಮಾಡಿದ್ದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

- Advertisement -
- Advertisement -

ಬೆಂಗಳೂರು: ನೂರು ರೂಪಾಯಿ ಕೇಳಿದಾಗಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ 65ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ಏನಿದು ಪ್ರಕರಣ?2018 ರಲ್ಲಿ ಜುಲೈಯಲ್ಲಿ ದಿನಕರನ್ ಎಂಬಾತ ಶಾಕಾಂಬರಿ ನಗರ ಅಂಬೇಡ್ಕ‌ರ್ ರಸ್ತೆಯಲ್ಲಿ ರಾಜರಾಜೇಶ್ವರಿ ಕೊಳಗೇರಿ ಕಡೆ ತೆರಳುತ್ತಿದ್ದರು.

ಈ ವೇಳೆ ದಿನಕರನ್ ರನ್ನು ಅಡ್ಡಗಟ್ಟಿದ್ದ ವೀರಮಣಿಕಂಠ ಅಲಿಯಾಸ್ ವಿಜಿ ಎಂಬಾತ ನೂರು ರೂಪಾಯಿ ಕೊಡುವಂತೆ ಪೀಡಿಸಿದ್ದ. ನನ್ನ ಬಳಿ ಹಣ ಇಲ್ಲ ಎಂದು ದಿನಕರನ್ ಹೇಳಿದಾಗ ಅವರಿಗೆ ವೀರಮಣಿಕಂಠ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದ. ದಿನಕರನ್ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ಜಯನಗರ ಠಾಣೆಯಲ್ಲಿ ಈ ಬಗ್ಗೆ ಎಫ್ ಐಆ‌ರ್ ದಾಖಲಾಗಿತ್ತು.ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರಾಸಿಕ್ಯೂಷನ್ ಒದಗಿಸಿದ ಬಲವಾದ ಸಾಕ್ಷ್ಯಗಳನ್ನು ಅಧರಿಸಿ ಆರೋಪಿ ವೀರಮಣಿಕಂಠನಿಗೆ ಶಿಕ್ಷೆ ವಿಧಿಸಿದೆ.

ಆದರೆ ಸಾ ನಾಶದ ಆರೋಪದಲ್ಲಿ ಎರಡನೇ ಆರೋಪಿಯಾಗಿದ್ದ ವೀರಮಣಿಕಂಠನ ತಾಯಿಯನ್ನು ಸಾಕ್ಷ್ಯಾಧಾರಗಳು ಕೊರತೆಯಿಂದ ದೋಷಯುಕ್ತ ಗೊಳಿಸಿ ತೀರ್ಪು ನೀಡಿದೆ.

- Advertisement -

Related news

error: Content is protected !!