Sunday, July 5, 2026
spot_imgspot_img
spot_imgspot_img

ಪುತ್ತೂರಿನ ಹಾಲಿ ಶಾಸಕರಿಂದ ಮಾಜಿ ಶಾಸಕರ ಮೇಲೆ ಲಂಚ ಸ್ವೀಕಾರ ಆರೋಪ

- Advertisement -
- Advertisement -

ಸುಳ್ಳು ಹೇಳಿಕೆ ಹಾಗೂ ಮಾನ ಖಂಡನಾ ಅಪರಾಧ ಅಡಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು…!

ಪುತ್ತೂರು ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕರಾದ ಅಶೋಕ್ ಕುಮಾರ್ ರೈ ಯವರು ಸಮಾಜದಲ್ಲಿ ಹೆಗ್ಗಳಿಕೆಯನ್ನು ಗಿಟ್ಟಿಸಿಕೊಳ್ಳುವ ತರಾತುರಿಯಲ್ಲಿ ಪುತ್ತೂರಿನ ಪತ್ರಿಕಾ ಪ್ರಮುಖರನ್ನು, ಮಾಧ್ಯಮದವರನ್ನು ತನ್ನ ಕಚೇರಿಗೆ ಕರೆಸಿ “ಪುತ್ತೂರಿನ ಇದೇ ಹಿಂದಿನ ಮಾಜಿ ಶಾಸಕರು ಅವರ ಸಮಯದಲ್ಲಿ ಹಕ್ಕು ಪತ್ರ ನೀಡಲು ಎಕ್ರೆಗೆ 2 ಲಕ್ಷ ಹಣವನ್ನು ತೆಗೆದುಕೊಳ್ಳುತ್ತಿದ್ದರು, ನನ್ನಲ್ಲಿ 45 ಜನ ಸಾಕ್ಷಿಗಳು ಇದ್ದಾರೆ” ಎಂದು ಮಾಜಿ ಶಾಸಕರಾದ ಸಂಜೀವ ಮಠಂದೂರು ಅವರ ಬಗ್ಗೆ, ಅವರನ್ನೇ ಗುರಿಯಾಗಿಸಿ ಮಾನ ಹಾನಿಕಾರಕ ಹೇಳಿಕೆಯನ್ನು ಹಾಗೂ ಸಮಾಜದಲ್ಲಿ ಅವರ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ತನ್ನ ರಾಜಕೀಯ ನಾಲಿಗೆಯನ್ನು ಹರಿಬಿಟ್ಟಿರುತ್ತಾರೆ.

ಪರಿಣಾಮವಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಈ ಬಗ್ಗೆ ಅಶೋಕ್ ಕುಮಾರ್ ರೈ ವಿರುದ್ಧ ಪುತ್ತೂರಿನ ನಗರ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದರು.

ಜುಲೈ 4 ರಂದು ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆಎಂ ಎಫ್ ಸಿ ನ್ಯಾಯಾಲಯದಲ್ಲಿ ದಾಖಲೆ ಸಹಿತ ಮಾಜಿ ಶಾಸಕರು ಅಶೋಕ್ ರೈ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿರುತ್ತಾರೆ, ದೂರನ್ನು ಸ್ವೀಕರಿಸಿ ವಾದ ಆಲಿಸಿದ ನ್ಯಾಯಾಲಯ ಮುಂದಿನ ಪ್ರಕಿಯೆಗೆ ಪ್ರಕರಣವನ್ನು ಮುಂದೂಡಿದೆ.

ದೂರುದಾರ ಸಂಜೀವ ಮಠಂದೂರು ಪರ ನ್ಯಾಯವಾದಿ ಶಿವಾನಂದ .ಎಂ. ವಕ್ಕೆತ್ತಿರಿ ವಿಟ್ಲ ವಾದ ಮಂಡಿಸಿದ್ದರು.

- Advertisement -

Related news

error: Content is protected !!