Thursday, July 9, 2026
spot_imgspot_img
spot_imgspot_img

ಗ್ರಾಹಕರ ಖಾತೆಗಳಲ್ಲಿ 1.3 ಕೋಟಿ ರೂ.ಹಣ ದುರುಪಯೋಗ; ಅಂಚೆ ಪಾಲಕ, ಸಹಾಯಕನನ್ನು ವಶಕ್ಕೆ ಪಡೆದ ಸಿಬಿಐ

- Advertisement -
- Advertisement -

ಬೆಂಗಳೂರು : ಗ್ರಾಹಕರ ಅಂಚೆ ಕಚೇರಿ ಉಳಿತಾಯ ಖಾತೆಗಳಿಂದ ಸುಮಾರು 1.3 ಕೋಟಿ ರೂ.ಗಳಷ್ಟು ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಮೈಸೂರಿನ ಸರಗೂರು ಅಂಚೆ ಕಚೇರಿಯ ಪಾಲಕ ಹಾಗೂ ಸಹಾಯಕನನ್ನು ಬೆಂಗಳೂರಿನ ಕೇಂದ್ರೀಯ ತನಿಖಾ ದಳದ(ಸಿಬಿಐ) ಅಧಿಕಾರಿಗಳು ಬಂಧಿಸಿದ್ದಾರೆ.ಅಂಚೆ ಸಹಾಯಕ ಮತ್ತು ಅಂಚೆ ಪಾಲಕ ಸುಮಾರು 44 ಮಂದಿ ಗ್ರಾಹರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹೀಗಾಗಿ ಬಿಎನ್‌ಎಸ್‌ ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್‌ ನಂಬಿಕೆ ಉಲ್ಲಂಘನೆ ಮತ್ತು ನಕಲಿ ದಾಖಲೆ ಸೃಷ್ಟಿ ಹಾಗೂ ಪಿಸಿ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳಿಬ್ಬರು 2022-2025ರ ಅವಧಿಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆಗಳಿಂದ ಹಣವನ್ನು ದುರುಪಯೋಗಪಡಿಸಿಕೊಂಡು, ಆ ಹಣವನ್ನು ತಮ್ಮ ಸಂಬಂಧಿಕರ ಹಾಗೂ ಸ್ವಂತ ಖಾತೆಗಳಿಗೆ ಜಮೆ ಮಾಡಿದ್ದಾರೆ.

ಗ್ರಾಹಕರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡು ಹಣವನ್ನು ವರ್ಗಾಯಿಸಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಇತರ ಖಾತೆಗಳಲ್ಲೂ ಹಣ ದುರುಪಯೋಗವಾಗಿರುವ ಶಂಕೆ ಇದ್ದು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!