
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 12ರಂದು (ಭಾನುವಾರ) ಸಂಜೆ 7 ಗಂಟೆಗೆ ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಲಿದೆ.2026–27ನೇ ಸಾಲಿನ ಅಧ್ಯಕ್ಷರಾಗಿ ಶಿಕ್ಷಕಿ ಶ್ವೇತಾ ರವಿಕುಮಾರ್, ಕಾರ್ಯದರ್ಶಿಯಾಗಿ ಉದ್ಯಮಿ ದಿನಕರ ಆಳ್ವ, ಹಾಗೂ ಕೋಶಾಧಿಕಾರಿಯಾಗಿ ಭಾರತ್ ಪೆಟ್ರೋಲ್ ಬಂಕ್‌ನ ಮಾಲಕರಾದ ಕೃಷ್ಣ ಅವರು ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಜಿಇಟಿ ಕೋ-ಆರ್ಡಿನೇಟರ್ ಜಗದೀಶ್ ಎಡಪಡಿತಾಯ ಹಾಗೂ ಚಿತ್ರಾ ಎಡಪಡಿತಾಯ ಅವರು ಪದಗ್ರಹಣ ಅಧಿಕಾರಿಗಳಾಗಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.ಗೌರವ ಅತಿಥಿಗಳಾಗಿ ನಿಕಟಪೂರ್ವ ಹೆಚ್ಚುವರಿ ಸಂಪುಟ ಕಾರ್ಯದರ್ಶಿ ಚಂದ್ರಹಾಸ್ ರೈ ಭಾಗವಹಿಸಿ ಚಾರ್ಟರ್ ನೈಟ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸದಸ್ಯರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.








