Sunday, September 13, 2026
spot_imgspot_img
spot_imgspot_img

ಪುತ್ತೂರು: ಪನಡ್ಕ ಕುಟುಂಬದ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

- Advertisement -
- Advertisement -

ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮದ ಪನಡ್ಕ ತರವಾಡು ಮನೆಯಲ್ಲಿ ’ಪನಡ್ಕ ಕುಟುಂಬದ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ’ವು ಫೆ.19ನೇ ಗುರುವಾರದಿಂದ ಫೆ.20 ಶುಕ್ರವಾರದ ತನಕ ನಡೆಯಲಿದ್ದು, ಪನಡ್ಕ ಕುಟುಂಬದ ದೈವಸ್ಥಾನದಲ್ಲಿ ಪಿಲಿಚಾಮುಂಡಿ, ವರ್ಣರಪಂಜುರ್ಲಿ, ಕುಪ್ಪೆಪಂಜುರ್ಲಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳ ನೇಮೋತ್ಸವವು ಜರಗಲಿರುವುದು.

ಫೆ.19 ರ ಗುರುವಾರ ಬೆಳಿಗ್ಗೆ ಗಂಟೆ 8-00ಕ್ಕೆ ಪುಣ್ಯಾಹ, ಗಣಪತಿ ಹವನ, ಧರ್ಮದೈವಗಳಿಗೆ ಕಲಶ, ತಂಬಿಲ, ನಾಗತಂಬಿಲ ಹಾಗೂ ಮಧ್ಯಾಹ್ನ 12-00ಕ್ಕೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಮುಡಿಪು ಸೇವೆ ನಂತರ 1-00 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ 7-30ಕ್ಕೆ ದೈವಗಳ ಭಂಡಾರ ತೆಗೆಯುವುದು, 8-30ಕ್ಕೆ ಅನ್ನಸಂತರ್ಪಣೆ ನಂತರ ರಾತ್ರಿ ಗಂಟೆ 10-45ಕ್ಕೆ ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.

ಫೆ. 20 ರ ಶುಕ್ರವಾರ ಬೆಳಿಗ್ಗೆ 6-00ಕ್ಕೆ ವರ್ಣರಪಂಜುರ್ಲಿ ದೈವದ ನೇಮೋತ್ಸವ, 10-30ಕ್ಕೆ ಕುಪ್ಪೆಪಂಜುರ್ಲಿ ದೈವದ ನೇಮೋತ್ಸವ, ಮಧ್ಯಾಹ್ನ 1-00 ಗಂಟೆಗೆ ಅನ್ನಸಂತರ್ಪಣೆ ಬಳಿಕ 2-00 ಗಂಟೆಗೆ ಗುಳಿಗ ದೈವದ ನೇಮೋತ್ಸವ, ಸಂಜೆ ಗಂಟೆ 6-30ಕ್ಕೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಟ್ಟಂಪಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆದು ರಾತ್ರಿ ಗಂಟೆ 7-30ಕ್ಕೆ ಕಲ್ಲುರ್ಟಿ ದೈವದ ಭಂಡಾರ ತೆಗೆಯುವುದು, 8-30ಕ್ಕೆ ಅನ್ನಸಂತರ್ಪಣೆ ಬಳಿಕ ರಾತ್ರಿ ಗಂಟೆ 10-00ಕ್ಕೆ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ.

ಫೆ.19 ಹಾಗೂ 20ರಂದು ದೈವಗಳ ನೇಮೋತ್ಸವದ ವಿಶೇಷ ಆಕರ್ಷಣೆಯಾಗಿ 19ರ ಗುರುವಾರ ರಾತ್ರಿ ಗಂಟೆ 10-30ಕ್ಕೆ ಸುಡುಮದ್ದು ಪ್ರದರ್ಶನ ನಡೆಯಲಿದೆ.

ಪನಡ್ಕ ತರವಾಡು ಮನೆಯಲ್ಲಿ ವರ್ಷಂಪ್ರತಿ ನಡೆಯುವ ಕಾರ್ಯಕ್ರಮಗಳು ಹೀಗಿವೆ: ಪ್ರತಿ ತಿಂಗಳ ಸಂಕ್ರಮಣದಂದು ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ (ಫೆಬ್ರವರಿ ತಿಂಗಳು ಬಿಟ್ಟು), ಎಪ್ರಿಲ್ ತಿಂಗಳ ಸಂಕ್ರಮಣದಂದು ವಿಷು ಕಣಿ, ನಾಗರ ಪಂಚಮಿ, ಆಟಿ ತಿಂಗಳಲ್ಲಿ–ಗುರುಕಾರ್ನವರಿಗೆ ಅಗೇಲು ಸೇವೆ ಹಾಗೂ ಕಲ್ಲುರ್ಟಿ ದೈವಕ್ಕೆ ವಿಶೇಷ ಅಗೇಲು ಸೇವೆ, ದೀಪಾವಳಿಯ ದಿನದಂದು ದೈವಗಳಿಗೆ ತಂಬಿಲ ಸೇವೆ, ನಾಗತಂಬಿಲ, ಬಲಿಯೇಂದ್ರ ಆಚರಣೆ, ಪ್ರತಿ ತಿಂಗಳ ಸಂಕ್ರಮಣದಂದು (ಅಗೇಲು ಸೇವೆ ನಡೆಯುವ ತಿಂಗಳ ಸಂಕ್ರಮಣದಂದು) ಹರಕೆ ರೂಪದಲ್ಲಿ ಕಲ್ಲುರ್ಟಿ ದೈವಕ್ಕೆ ನರ್ತನ ಸೇವೆಯನ್ನು ನೀಡಬಹುದು.

- Advertisement -

Related news

error: Content is protected !!