Sunday, July 12, 2026
spot_imgspot_img
spot_imgspot_img

ಕಾಸರಗೋಡು: ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಮೃತ್ಯು

- Advertisement -
- Advertisement -

ಕಾಸರಗೋಡು: ನಿರ್ವಹಣಾ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಕೆಎಸ್‌ಇಬಿ ಲೈನ್‌ಮ್ಯಾನ್ ಸಾವನ್ನಪ್ಪಿದ ಘಟನೆ ಶುಕ್ರವಾರ ನೀಲೇಶ್ವರ ಬಳಿಯ ಮಡಿಕೈನಲ್ಲಿ ನಡೆದಿದೆ.

ಮೃತರನ್ನು ಪುಲ್ಲೂರು ಮಧುರಂಬಾಡಿ ನಿವಾಸಿ ಭರತನ್ (52) ಎಂದು ಗುರುತಿಸಲಾಗಿದೆ. ಇವರು ಕೇರಳ ರಾಜ್ಯ ವಿದ್ಯುತ್ ಮಂಡಳಿಯ (ಕೆಎಸ್‌ಇಬಿ) ಮಾವುಂಗಲ್ ವಿಭಾಗದ ಉದ್ಯೋಗಿಯಾಗಿದ್ದರು.

ಮಡಿಕೈ ಕಣಿಚ್ಚಿರಾ ಸೇತುವೆಯ ಬಳಿಯ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಕಣಿಚ್ಚಿರಾ ಪ್ರದೇಶದಲ್ಲಿ ವಿದ್ಯುತ್ ತಂತಿಯಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಲು ಭರತನ್ ವಿದ್ಯುತ್ ಕಂಬ ಹತ್ತಿದ್ದಾಗ ಅನಿರೀಕ್ಷಿತವಾಗಿ ವಿದ್ಯುತ್ ತಂತಿ ಸ್ಪರ್ಶಿಸಿದೆ.

ಅವರು ಸೊಂಟಕ್ಕೆ ಸುರಕ್ಷತಾ ಬೆಲ್ಟ್ ಧರಿಸಿದ್ದರಿಂದ, ವಿದ್ಯುತ್ ಆಘಾತದ ನಂತರ ಅವರ ಮೃತ ದೇಹವು ಕಂಬದ ಮೇಲೆ ನೇತಾಡುತ್ತಿತ್ತು. ನಂತರ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಕೆಳಗಿಳಿಸಿದರು.

- Advertisement -

Related news

error: Content is protected !!