Tuesday, July 14, 2026
spot_imgspot_img
spot_imgspot_img

ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು ವಿಟ್ಲ ಇದರ ಬೆಳ್ಳಿ ಹಬ್ಬದ ಸಂಭ್ರಮ

- Advertisement -
- Advertisement -

ಬೆಳ್ಳಿ ಹಬ್ಬದ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು, ವಿಟ್ಲ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಸಮಿತಿ ರಚನೆ ಹಾಗೂ ಮುಂದಿನ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು.

ಮುಂದಿನ ವರ್ಷ ಫೆಬ್ರವರಿಯಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಇದರ ಸಲುವಾಗಿ ಕ್ರೀಡಾಕೂಟ, ಸಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಹಾಗೂ ಇತರೆ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ಳಿ ಹಬ್ಬ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀ ಮೋಹನ್ ಕಾಮಟ, ಅಧ್ಯಕ್ಷರಾಗಿ ವಿಶ್ವನಾಥ್ ನಾಯ್ತೊಟ್ಟು, ಉಪಾಧ್ಯಕ್ಷರಾಗಿ ದಯಾನಂದ ಬೋಡ್ಡೋಣಿ ಹಾಗೂ ರವಿ ಅಂಚನ್, ಕಾರ್ಯದರ್ಶಿಯಾಗಿ ದಿನೇಶ್ ಕುಮಾರ್ ಮಾಡ್ತೇಲ್, ಜೊತೆ ಕಾರ್ಯದರ್ಶಿಯಾಗಿ ಪುರಂದರ ಅಂಚನ್, ಸಂಘಟನ ಕಾರ್ಯದರ್ಶಿಯಾಗಿ ಕರುಣಾಕರ ನಾಯ್ತೊಟ್ಟು, ಕೋಶಾಧಿಕಾರಿಯಾಗಿ ಧನಂಜಯ ನಾಯ್ತೊಟ್ಟು ಅವರನ್ನು ಯುವಕ ಮಂಡಲದ ಅಧ್ಯಕ್ಷರಾದ ಪ್ರವೀಣ್ ರಾಜ್ ಕಾಮಟ ಘೋಷಿಸಿದರು. ಯುವಕ ಮಂಡಲದ ಕಾರ್ಯದರ್ಶಿ ನಿತಿನ್ ಬೊಡ್ಡೋಣಿ ಸ್ವಾಗತಿಸಿ, ಸಹ ಕಾರ್ಯದರ್ಶಿ ಪ್ರವೀಣ್ ನಡುವಡ್ಕ ವಂದಿಸಿದರು.

- Advertisement -

Related news

error: Content is protected !!