


ಬೆಂಗಳೂರು: ಐದು ಸಾವಿರ ರೂ. ಲಂಚ ಪಡೆದ ಆರೋಪದ ಮೇಲೆ ಪುಲಕೇಶಿನಗರ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಒಬ್ಬರನ್ನ ಅಮಾನತು ಮಾಡಿರುವ ಘಟನೆ ನಡೆದಿದೆ.
ಸೋಮಶೇಖರ್ ಅಮಾನತುಗೊಂಡ ಹೆಡ್ ಕಾನ್ಸ್‌ಟೇಬಲ್. ಬೆಂಗಳೂರು ಪೂರ್ವ ವಿಭಾಗ ಟ್ರಾಫಿಕ್ ಡಿಸಿಪಿ ಸಾಹಿಲ್ ಬಾಗ್ಲಾ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸೋಮಶೇಖರ್ ಅವರು ವಾಹನ ತಪಾಸಣೆ ಕರ್ತವ್ಯದಲ್ಲಿದ್ದಾಗ, ಕಬ್ಬಿಣ ತುಂಬಿದ ಲಾರಿ ಚಾಲಕ ಸಯ್ಯದ್ ಅಪ್ರೋಜ್ ಎಂಬಾತನಿಂದ ಐದು ಸಾವಿರ ರೂ. ಲಂಚ ಪಡೆದಿದ್ದರು. ಲಂಚ ಪಡೆದು ವಾಹನ ಬಿಟ್ಟುಕಳಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಹೆಡ್ ಕಾನ್ಸ್‌ಟೇಬಲ್ ಸೋಮಶೇಖರ್, ಕೇಸ್ ದಾಖಲಿಸಿದರೆ ಕೋರ್ಟ್‌ನಲ್ಲಿ ಫೈನ್ ಕಟ್ಟಬೇಕು ಅಂತ ಬೆದರಿಸಿ ಹಣ ಪಡೆದುಕೊಂಡಿದ್ದು, ಹಣ ನೀಡುವ ವೇಳೆ ಲಾರಿ ಚಾಲಕ ಅಪ್ರೋಜ್ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಕರ್ತವ್ಯ ಲೋಪ ಎಸಗಿ ಹಣ ಪಡೆದ ಆರೋಪ ಅಡಿಯಲ್ಲಿ ಸೋಮಶೇಖರ್‌ನನ್ನ ಅಮಾನತು ಮಾಡಲಾಗಿರುವುದಾಗಿ ತಿಳಿದುಬಂದಿದೆ.








