Monday, July 27, 2026
spot_imgspot_img
spot_imgspot_img

ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿ ಕುಸಿದ ಶತಮಾನಗಳ ಹಳೆಯ ಗಡಿಯಾರ ಗೋಪುರ

- Advertisement -
- Advertisement -

ಕೋಝಿಕ್ಕೋಡ್, ಜು. 9: ಕೇರಳದ ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿದ್ದ 100 ವರ್ಷಕ್ಕಿಂತಲೂ ಹಳೆಯದಾದ ಗಡಿಯಾರ ಗೋಪುರ ಗುರುವಾರ ಮುಂಜಾನೆ ಕುಸಿದು ಬಿದ್ದಿದೆ.

ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.20-25 ಮೀಟ‌ರ್ ಎತ್ತರದ ಈ ಗಡಿಯಾರ ಗೋಪುರದ ಅರ್ಧಕ್ಕಿಂತ ಹೆಚ್ಚಿನ ಭಾಗವು 2ನೇ ಪ್ಲಾಟ್‌ಫಾಮ್ ಮೇಲೆ ಬಿದ್ದಿದೆ. ಘಟನೆಯ ಸಂದರ್ಭ ಫ್ಲಾಟ್ ಫಾರ್ಮ್‌ನಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ರೈಲ್ವೆ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಗಡಿಯಾರ ಗೋಪುರ ಶಿಥಿಲ ಸ್ಥಿತಿಯಲ್ಲಿದ್ದುದರಿಂದ ಇದನ್ನು ಈಗಾಗಲೇ ಕೆಡವಲು ನಿರ್ಧರಿಸಲಾಗಿತ್ತು ಎಂದು ಕೋಝಿಕ್ಕೋಡ್ ರೈಲ್ವೆ ಪೊಲೀಸ್‌ ಠಾಣೆಯ ಕೋಝಿಕ್ಕೋಡ್ ರೈಲ್ವೆ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಈ ಹಠಾತ್ ಕುಸಿತ ಕಟ್ಟಡದ ಸುತ್ತ ಕೈಗೊಳ್ಳಬೇಕಾಗಿದ್ದ ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.ಘಟನೆ ಬಗ್ಗೆ ಮಾತನಾಡಿದ ಸಿಪಿಐ(ಎಂ) ಶಾಸಕ ಪಿ.ಎ.ಮುಹಮ್ಮದ್ ರಿಯಾಸ್, ಕಟ್ಟಡದ ಸುತ್ತಲೂ ಎಚ್ಚರಿಕೆ ಫಲಕಗಳು ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೆ, ಕೇರಳದಾದ್ಯಂತ ಇರುವ ರೈಲು ನಿಲ್ದಾಣಗಳಲ್ಲಿ ಇಂತಹ ಹಳೆಯ ಕಟ್ಟಡಗಳ ಸುರಕ್ಷತಾ ತಪಸಾಣೆ ನಡೆಸುವಂತೆ ಆಗ್ರಹಿಸಿದ್ದಾರೆ.

ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿ ಗಡಿಯಾರ ಗೋಪುರ ಕುಸಿದಿರುವುದರಿಂದ ಯಾರಿಗೂ ಗಾಯಗಳಾಗಿಲ್ಲ. ಆದರೆ, ಇದು ಹಳೆಯದಾಗುತ್ತಿರುವ ರೈಲ್ವೆ ಕಟ್ಟಡದ ಸುತ್ತ ಮನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದೆ.

- Advertisement -

Related news

error: Content is protected !!