Monday, August 3, 2026
spot_imgspot_img
spot_imgspot_img

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ 24X7 ಸರ್ಪಗಾವಲಿಗೆ 7.5 ಕೋಟಿ ರೂ.ಟೆಂಡ‌ರ್ ಕರೆದ ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ

- Advertisement -
- Advertisement -

ಹೊಸದಿಲ್ಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ತನ್ನ ಪರೀಕ್ಷಾ ವ್ಯವಸ್ಥೆಯ ಭದ್ರತೆಯನ್ನು ಬಲಪಡಿಸಲು ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (NTA), ದೇಶಾದ್ಯಂತ ತನ್ನ ಮುಖ್ಯ ಕಾರ್ಯಾಲಯಗಳು, ಪ್ರಾದೇಶಿಕ ಕಚೇರಿಗಳು ಮತ್ತಿತರ ಸೂಕ್ಷ್ಮಸಂವೇದಿ ಸ್ಥಳಗಳಲ್ಲಿ 24×7 ಭದ್ರತಾ ಸೇವೆಗಳ ನಿರ್ವಹಣೆಗೆ ವೃತ್ತಿಪರ ಏಜೆನ್ಸಿಯೊಂದನ್ನು ನೇಮಿಸಲು ಅಂದಾಜು 7.5 ಕೋಟಿ ರೂ. ಮೌಲ್ಯದ ಟೆಂಡ‌ರ್ ಪ್ರಕಟಿಸಿದೆ.ಪರೀಕ್ಷಾ ವ್ಯವಸ್ಥೆಯ ಪ್ರಾಮಾಣಿಕತೆಯನ್ನು ಬಲಪಡಿಸಲು ಜಾರಿಗೊಳಿಸಲಾಗುವ ವಿಸ್ಕೃತ ಕ್ರಮಗಳ ಭಾಗವಾಗಿ ಹೌಸ್ ಕೀಪಿಂಗ್ ಹಾಗೂ ಮುದ್ರಣ ಸೇವೆಗಳ ಪೂರೈಕೆಗಳಿಗೂ ಅದು ಬಿಡ್ಗಳನ್ನು ಆಹ್ವಾನಿಸಿದೆ.

ಜುಲೈ 25ರಂದು ಜಾರಿಗೊಳಿಸಲಾದ ಟೆಂಡ‌ರ್ ಪ್ರಕಾರ, ಬಿಡ್ಡಿಂಗ್ ನಲ್ಲಿ ಆಯ್ಕೆಯಾದ ಏಜೆನ್ಸಿಯು ದಿಲ್ಲಿಯ ಮಿಂಟೊ ರಸ್ತೆಯಲ್ಲಿನ ಎಸ್ಟಿಎ ಮುಖ್ಯ ಕಾರ್ಯಾಲಯ, ಓಕ್ಲಾದ ಪ್ರಾದೇಶಿಕ ಕಚೇರಿ ಹಾಗೂ ಇತರ ಅಧಿಸೂಚಿತ ಸ್ಥಳಗಳಲ್ಲಿ ಭದ್ರತೆಯನ್ನು ಒದಗಿಸಲಿದೆ.

ಸಿಬ್ಬಂದಿಗಳು, ಸಂದರ್ಶಕರು, ಗೋಪ್ಯವಾದ ಪರೀಕ್ಷಾ ಸಾಮಾಗ್ರಿಗಳು, ಸರ್ವರ್ ಕೊಠಡಿಗಳು, ಸ್ಟ್ರಾಂಗ್ ರೂಂಗಳು, ಗೋದಾಮುಗಳು, ರೆಕಾರ್ಡ್ ರೂಮ್ ಗಳು ಹಾಗೂ ಇತರ ಸೂಕ್ಷ್ಮಸಂವೇದಿ ಸ್ಥಳಗಳಲ್ಲಿ ಅವುಗಳನ್ನು ಇರಿಸಲಾಗುವುದು.ಪ್ರಸ್ತಾವಿತ ಗುತ್ತಿಗೆಯು, ಪ್ರಾರಂಭದಲ್ಲಿ ಎರಡು ವರ್ಷಗಳ ಕಾಲ ಇರುವುದು, ನಿಯೋಜಿತ ಭದ್ರತಾ ಸಂಸ್ಥೆಯ ನಿರ್ವಹಣೆ ತೃಪ್ತಿಕರವಾಗಿದ್ದಲ್ಲಿ ಅವುಗಳಿಗೆ ಎರಡು ಬಾರಿ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗುವುದು. ಆಸಕ್ತಿ ಏಜೆನ್ಸಿಗಳು ಆಗಸ್ಟ್ 17ರ ಮಧ್ಯಾಹ್ನ 3:00 ಗಂಟೆಯೊಳಗೆ ಸಲ್ಲಿಸಬಹುದಾಗಿದೆ ಎಂದು ಎನ್ನಿಎನ ಅಧಿಕೃತ ಪ್ರಕಟಣೆ ತಿಳಿಸಿದೆ.

ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಮೇ 3ರಂದು ನಡೆದ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು ಮತ್ತು ಜೂನ್ 21ರಂದು ಮರುಪರೀಕ್ಷೆಯನ್ನು ನಡೆಸಲಾಗಿತ್ತು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದಿಲ್ಲಿಯ ಜಂತರ್ಮಂತರ್ ಸೇರಿದಂತೆ ರಾಷ್ಟ್ರಾದ್ಯಂತ ಪ್ರತಿಭಟನೆಗಳು ನಡೆದು, ಅಂತಿಮವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಾಜೀನಾಮೆ ನೀಡಿದ್ದರು.

- Advertisement -

Related news

error: Content is protected !!